ಸಜ್ಜನ ಜಯಪ್ರಕಾಶ್ ಹೆಗಡೆಗೆ ಭಾರಿ ಜಯ

ಎಲ್ಲ ಸುತ್ತುಗಳ (16ನೇ) ಮತ ಎಣಿಕೆ ಮುಗಿದಿದೆ - ಕಾಂಗ್ರೆಸ್ : 3,92,336, ಬಿಜೆಪಿ: 3,46,329, ಜೆಡಿಎಸ್: 70,209.
ಮೊದಲ ಸುತ್ತಿನಿಂದಲೂ ಗೆಲುವಿನ ನಾಗಾಲೋಟದಲ್ಲಿದ್ದ ಜಯಪ್ರಕಾಶ್ ಹೆಗಡೆ ನಿರಾಯಾಸವಾಗಿ ಗೆಲುವು ದಕ್ಕಿಸಿಕೊಂಡಿದ್ದಾರೆ. 4 ಲಕ್ಷ ಮತಗಳವರೆಗೂ ಬಂದ ಹೆಗಡೆ, ಸುನಿಲ್ ಕುಮಾರ್ ಗೆ 3.5 ಲಕ್ಷ ಮತ ಗಡಿ ದಾಟದಂತೆ ಮಾಡಿದ್ದಾರೆ.
ಉಡುಪಿ ಮತ್ತು ಚಿಕ್ಕಮಗಳೂರು ಎಂಬ ಭೇದವೆಣಿಸದೆ ಎರಡೂ ಕ್ಷೇತ್ರಗಳ ಮತದಾರರು ಜಯಪ್ರಕಾಶ್ ಹೆಗಡೆಯತ್ತ ಅಂಖಡ ನಿಷ್ಠೆ ತೋರಿ, ಗೆಲುವು ತಂದುಕೊಟ್ಟಿದ್ದಾರೆ. ಒಂದೆಡೆ ಅಚಾರ್ಯರಿಲ್ಲದ, ಮತ್ತೊಂದೆಡೆ ಕಳೆದ ಚುನಾವಣೆಯಲ್ಲಿ ಏಕಾಂಗಿಯಾಗಿ ಸದಾನಂದಗೌಡರಿಗೆ ಗೆಲುವು ತಂದುಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಗೆಲುವು ನಿರಾಯಾಸವಾಗಿದೆ ಎಂದೇ ಹೇಳಬಹುದು. ಬಿಜೆಪಿ, ತದನಂತರ ಹಾಲಿ ಮುಖ್ಯಮಂತ್ರಿ ಸದಾನಂದಗೌಡರಿಗೆ ಭಾರಿ ಮುಖಭಂಗವಾಗಿದೆ.












Click it and Unblock the Notifications