ಬಜೆಟ್ ನಲ್ಲಿ ತೆರಿಗೆ ಹೊರೆ, ಇಳಿಕೆ ಎಷ್ಟಾಗಿದೆ?

2011-12ರ ಆಯವ್ಯಯ ಅಂದಾಜಿನಲ್ಲಿ ನಿಗದಿಪಡಿಸಿದ ತೆರಿಗೆ ಸಂಗ್ರಹಣೆ ಗುರಿಯನ್ನು ಪ್ರಸ್ತುತ ಬಜೆಟ್ ನಲ್ಲೂ ಕೂಡ ವಾಣಿಜ್ಯ ತೆರಿಗೆ ಇಲಾಖೆ ಗುರಿ ಮೀರಿ ಸಾಧನೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ 26,700 ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹಣೆ ಗುರಿಯಿದ್ದು ಅದಕ್ಕಿಂತ ಕನಿಷ್ಠ 500 ಕೋಟಿ ರೂಪಾಯಿಗಳ ಹೆಚ್ಚಿನ ತೆರಿಗೆ ಸಂಗ್ರಹಣೆ ಆಗುವ ನಿರೀಕ್ಷೆ ಇದೆ.
ಇ-ಆಡಳಿತದಲ್ಲಿ ಇಲಾಖೆಯು ಗಮನಾರ್ಹ ಅಭಿವೃದ್ಧಿ ಸಾಧಿಸಿದೆ. ಕಳೆದ ವರ್ಷ ಆರಂಭಿಸಲಾದ ಇ-ಪಾವತಿ ಪದ್ಧತಿಯನ್ನು ಎಲ್ಲರೂ ಸ್ವಾಗತಿಸಿದ್ದು, ಈ ವಿಧಾನದಲ್ಲಿ ಶೇ.80ಕ್ಕಿಂತಲೂ ಮಿಗಿಲಾಗಿ ತೆರಿಗೆ ಸಂಗ್ರಹಣೆಯಾಗುತ್ತಿದೆ.[ ಬಜೆಟ್ ಮುಖ್ಯಾಂಶಗಳನ್ನು ಓದಿ]
ಮೌಲ್ಯವರ್ಧಿತ ತೆರಿಗೆ: ತೆರಿಗೆ ಪರಿಹಾರಗಳನ್ನಲ್ಲದೆ ತೆರಿಗೆ ಅನುಸರಣೆಯನ್ನು ಸರಳವಾಗಿಸಲು ಕಾಯ್ದೆ ಮತ್ತು ನಿಯಮಗಳಲ್ಲಿ ಮಾರ್ಪಾಡುಗಳನ್ನು ಕೋರುವ ಹಲವಾರು ಮನವಿಗಳು ಮತ್ತು ಸಲಹೆಗಳನ್ನು ವಾಣಿಜ್ಯೋದ್ಯಮಗಳು ಸಲ್ಲಿಸಿದೆ.
ಪರಿಹಾರಗಳು:
* ಮೌಲ್ಯವರ್ಧಿತ ತೆರಿಗೆ ಅಡಿಯಲ್ಲಿ ನಾನು ಮುಂದಿನ ಪರಿಹಾರ ಕ್ರಮಗಳನ್ನು ಪ್ರಸ್ತಾವಿಸುತ್ತೇನೆ.
* ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು ಹಾಗೂ ಅಕ್ಕಿ ಮತ್ತು ಗೋಧಿಯ
ಪದಾರ್ಥಗಳ ಮೇಲಿನ ತೆರಿಗೆ ವಿನಾಯಿತಿಯನ್ನು 2012ರ
ಏಪ್ರಿಲ್‌ನಿಂದ ಮುಂದುವರಿಸಲಾಗುವುದು.
* ಬೇಯಿಸಲು ತಯಾರಿರುವ ಚಪಾತಿ ಮತ್ತು ಪರೋಟಗಳ ಮೇಲಿನ
ತೆರಿಗೆಯನ್ನು ಶೇ. 14 ರಿಂದ ಶೇ. 5ಕ್ಕೆ ಇಳಿಸಲಾಗುವುದು.
* ಕಚ್ಛಾ ಹತ್ತಿ ಮೇಲಿನ ತೆರಿಗೆಯನ್ನು ಶೇ.5 ರಿಂದ ಶೇ.2ಕ್ಕೆ ಇಳಿಸಲಾಗುವುದು.
* ಒಣಮೆಣಸಿನಕಾಯಿ ಮೇಲಿನ ತೆರಿಗೆಯನ್ನು ಶೇ.5 ರಿಂದ ಶೇ.2ಕ್ಕೆ ಇಳಿಸಲಾಗುವುದು. ಇದಲ್ಲದೆ, ಅವುಗಳ ಅಂತರರಾಜ್ಯ ಮಾರಾಟ ಮೇಲಿನ ಕೇಂದ್ರ ಮಾರಾಟ ತೆರಿಗೆಯನ್ನು ಶೇ. 1ರಿಂದ ಶೇ.2ಕ್ಕೆ ಇಳಿಸಲಾಗುವುದು.
* ಸರ್ಜಿಕಲ್ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ.14ರಿಂದ ಶೇ.5 ಕ್ಕೆ ಇಳಿಸಲಾಗುವುದು.
* ಬ್ರೇಲ್ ಕೈಗಡಿಯಾರಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗುವುದು.
* ಕಪ್ಪು ಹಲಗೆಗಳ ಮೇಲಿನ ತೆರಿಗೆಯನ್ನು ಶೇ.14 ರಿಂದ ಶೇ.5ಕ್ಕೆ ಇಳಿಸಲಾಗುವುದು.
* ಬಂಗಾರ ಮತ್ತಿತರೆ ಬೆಲೆಬಾಳುವ ಲೋಹಗಳ ಆಭರಣಗಳು ಮತ್ತು ವಸ್ತುಗಳು ಹಾಗೂ ಅಮೂಲ್ಯ ಮತ್ತು ಅರೆ-ಅಮೂಲ್ಯ ಹರಳುಗಳ ಮೇಲಿನ ತೆರಿಗೆಯನ್ನು ಶೇ.2 ರಿಂದ ಶೇ.1ಕ್ಕೆ ಇಳಿಸಲಾಗುವುದು.
* ಸಿದ್ಧಪಡಿಸಿದ ಉಡುಪುಗಳ ತಯಾರಿಕೆ ಮತ್ತು ಕಸೂತಿ ಕೆಲಸಗಳ ಗುತ್ತಿಗೆ ಕಾಮಗಾರಿಗಳ ಮೇಲಿನ ತೆರಿಗೆಯನ್ನು ಶೇ.14 ರಿಂದ ಶೇ.5 ಕ್ಕೆ ಇಳಿಸಲಾಗುವುದು.
* ಹೊರದೇಶಕ್ಕೆ ಪ್ರಯಾಣ ಮಾಡುವ ಹಡಗುಗಳಿಗೆ ಮಾರಾಟ ಮಾಡುವ
ಫರ್ನೇಸ್ ಆಯಿಲ್ ಮೇಲಿನ ತೆರಿಗೆಯನ್ನು ಶೇ.14 ರಿಂದ ಶೇ.5 ಕ್ಕೆ ಇಳಿಸಲಾಗುವುದು.
* ನಾಫ್ತಾ ಮೇಲಿನ ತೆರಿಗೆಯನ್ನು ಶೇ.14 ರಿಂದ ಶೇ.5 ಕ್ಕೆ ಇಳಿಸಲಾಗುವುದು.
* ಬೀಡಿಗಳ ಮೇಲೆ ಶೇ.5ರ ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುವುದು.
* ಸಿಗರೇಟುಗಳು ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.15 ರಿಂದ ಶೇ.17ಕ್ಕೆ ಏರಿಸಲಾಗುವುದು.
* ಪ್ಲಾಸ್ಟಿಕ್‌ನಿಂದ ನೇಯ್ದ ಬಟ್ಟೆಗಳ ಮೇಲೆ ಶೇ.5ರ ಮೌಲ್ಯವರ್ಧಿತ ತೆರಿಗೆ ವಿಧಿಸಲಾಗುವುದು.
ಕೇಂದ್ರ ಮಾರಾಟ ತೆರಿಗೆ: ಸುಧಾರಣಾ ಕ್ರಮ:
* ಒಣಮೆಣಸಿನಕಾಯಿ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.5 ರಿಂದ ಶೇ.2 ಕ್ಕೆ ಇಳಿಕೆ. ಅಂತರರಾಜ್ಯ ಮಾರಾಟಗಳ
ಮೇಲಿನ ಕೇಂದ್ರ ಮಾರಾಟ ತೆರಿಗೆ ದರವನ್ನು ಶೇ.1 ರಿಂದ ಶೇ.2ಕ್ಕೆ ಏರಿಕೆಗೆ ಪ್ರಸ್ತಾವನೆ.
ಮಾರಾಟ ತೆರಿಗೆ:
* ಡೀಸೆಲ್ ಮೇಲಿನ ತೆರಿಗೆಯನ್ನು ಶೇ.1.25ಕ್ಕೆ ಇಳಿಸಲು ನಾನು ಪ್ರಸ್ತಾವಿಸುತ್ತೇನೆ. ಅದರಿಂದ, ಡೀಸೆಲ್ ಮೇಲಿನ ತೆರಿಗೆ ಶೇ.18 ರಿಂದ ಶೇ.16.75 ಕ್ಕೆ ಇಳಿಯುತ್ತದೆ.
* ಹೊರದೇಶಗಳಿಗೆ ಪ್ರಯಾಣ ಮಾಡುತ್ತಿರುವ ಹಡಗುಗಳಿಗೆ ಮಾರಾಟ ಮಾಡುವ ಹೈ ಫ್ಲಾಶ್ ಹೈ ಸ್ಪೀಡ್ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.18 ರಿಂದ ಶೇ.1ಕ್ಕೆ ಇಳಿಸಲು ನಾನು ಪ್ರಸ್ತಾವಿಸುತ್ತೇನೆ.
ವಿಲಾಸ ತೆರಿಗೆ:
* ತಾತ್ಕಾಲಿಕ ಶೆಡ್‌ಗಳಲ್ಲಿ ನಡೆಸಲಾಗುತ್ತಿರುವ ಕಲ್ಯಾಣ ಮಂಟಪಗಳ ಮೇಲೆ ಶೇ.10 ರಷ್ಟು ತೆರಿಗೆ
* ವಿಚಾರ ಸಂಕಿರಣ ಸಭಾಂಗಣ, ಸಮ್ಮೇಳನ ಸಭಾಂಗಣ ಮತ್ತು ಅಂತಹವುಗಳ ಮೇಲೆ ಶೇ.10 ತೆರಿಗೆ
ಕೃಷಿ ವರಮಾನ ತೆರಿಗೆ:ಪರಿಹಾರ:
* ಪಾಲುದಾರಿಕೆ ಸಂಸ್ಥೆಗಳನ್ನು ಕೃಷಿ ವರಮಾನ ತೆರಿಗೆಯಿಂದ ವಿನಾಯಿತಿ.
* ಜೂಜು ತೆರಿಗೆಯಡಿಯಲ್ಲಿ ಅಧಿಕ ಸಂಪನ್ಮೂಲ ಕ್ರೋಢೀಕರಣ ಕ್ರಮ.












Click it and Unblock the Notifications