ಕ್ಯಾನ್ಸರ್ ಜೀವರಕ್ಷಕ ಔಷಧಿ ಆಯ್ತು ಅಗ್ಗ

Cancer Drug gets cheaper
ನವದೆಹಲಿ, ಮಾ.13: ಕ್ಯಾನ್ಸರ್ ಹಾಗೂ ಮೂತ್ರಪಿಂಡ ರೋಗಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಪ್ರಮುಖ ಔಷಧಿ ನೆಕ್ಸಾವರ್ ಮಾತ್ರೆಗಳ ಬೆಲೆ 2.84 ಲಕ್ಷರು.ಗಳಿಂದ 8,880 ರು.ಗಳಿಗೆ ಇಳಿಕೆಯಾಗಿದೆ.

ಜೊತೆಗೆ ಎಂಎನ್ ಸಿ ಬಾಯರ್ ಕಂಪನಿ ಬದಲಿಗೆ ಹೈದರಾಬಾದಿನ ನ್ಯಾಟ್ಕೊ ಫಾರ್ಮಾ ಕಂಪನಿಗೆ ಮಾತ್ರೆ ತಯಾರಿಕೆಗೆ ಅನುಮತಿ ನೀಡಲಾಗಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಔಷಧ ನಿಯಂತ್ರಣ ಸಂಸ್ಥೆ ಇಂಡಿಯನ್ ಪೇಟೆಂಟ್ ಕಾಯಿದೆ ಸೆಕ್ಷನ್ 84ರ ಅನ್ವಯ ಮಾತ್ರೆಗಳ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡುವಂತೆ ಸರ್ಕಾರ ಆದೇಶಿಸಿದೆ.

ಜರ್ಮನ್ ಮೂಲದ ಮಲ್ಟಿನ್ಯಾಷನಲ್ ಬಾಯರ್ ಕಂಪನಿ ಈ ಮಾತ್ರೆಗಳ ಪೇಟೆಂಟ್ ಹೊಂದಿದೆ. ಈ ವರೆಗೂ 120 ಮಾತ್ರೆಗಳ ಪ್ಯಾಕೆಟ್ ಅನ್ನು 2.84 ಲಕ್ಷ ರು.ಗಳಿಗೆ ಮಾರಾಟ ಮಾಡಲಾಗುತ್ತಿತ್ತು.

ಔಷಧಿ ನಿಯಂತ್ರಣ ಸಂಸ್ಥೆ ಕಡ್ಡಾಯ ಅನುಮತಿ ಪಡೆಯುವ ಆದೇಶ ಹೊರಡಿಸಿ, ಪರವಾನಗಿ ಪಡೆಯುವ ಮುನ್ನ ಔಷಧಿ ಬೆಲೆಯನ್ನು 8,880ರು.ಗೆ ಇಳಿಸುವಂತೆ ಸೂಚನೆ ನೀಡಲಾಗಿದೆ.

ಈ ಔಷಧಿಗಳನ್ನು ಭಾರತದಲ್ಲೇ ತಯಾರಿಸುವಂತೆ ಔಷಧಿಗಳ ಪೇಟೆಂಟ್ ನಿಯಂತ್ರಕ ಪಿ.ಎಚ್ ಕುರಿಯನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+