ಪಿಯು ವಿದ್ಯಾರ್ಥಿಗಳೇ ಭಯ ಬೇಡ, ಸಹಾಯವಾಣಿ ಇಲ್ಲಿದೆ

Karnataka 2nd PUC helpline
ಬೆಂಗಳೂರು, ಮಾ. 12 : ಇಡೀ ವರ್ಷ ಚೆನ್ನಾಗಿ ಓದಿರುತ್ತಾರೆ, ಎಲ್ಲ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಬಲ್ಲೆನೆಂಬ ವಿಶ್ವಾಸ ತುಂಬಿ ತುಳುಕಾಡುತ್ತಿರುತ್ತದೆ. ಆದರೆ, ಪರೀಕ್ಷೆ ಇನ್ನೆರಡೇ ದಿನ ಇದೆ ಎನ್ನುವಾಗ ಆತ್ಮವಿಶ್ವಾಸ ಬಸಿದುಬಿಟ್ಟಿರುತ್ತದೆ. ಉತ್ತರಗಳು ನೆನಪಿಗೆ ಬರುವುದಿಲ್ಲ. ಹತಾಶೆ ಅಪಾರವಾಗಿ ಕಾಡಲು ಪ್ರಾರಂಭಿಸುತ್ತದೆ.

ಈ ಪರೀಕ್ಷೆ ಫೋಬಿಯಾ ಅನೇಕರನ್ನು ಕಾಡುವುದು ಸಹಜ. ಆದರೆ, ವಿದ್ಯಾರ್ಥಿಗಳು ಚಿಂತಿಸಬೇಕಿಲ್ಲ. ಮಾರ್ಚ್ 15ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ಪಿಯು ವಿದ್ಯಾರ್ಥಿಗಳಿಗೆಂದೇ ಪದವಿಪೂರ್ವ ಶಿಕ್ಷಣ ಇಲಾಖೆ ಆರಂಭಿಸಿರುವ ಸಹಾಯವಾಣಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಕ್ಷಮವಾಗಿ ತಯಾರಿ ನಡೆಸಲು ಶ್ರಮಿಸುತ್ತಿದೆ. ಅದರ ಸಹಾಯಪಡೆದು ವಿದ್ಯಾರ್ಥಿಗಳು ವಿಶ್ವಾಸದಿಂದ ಪರೀಕ್ಷೆ ಎದುರಿಸಬಹುದಾಗಿದೆ.

ವಿದ್ಯಾರ್ಥಿಗಳಲ್ಲಿನ ಖಿನ್ನತೆ ಓಡಿಸಿ ಅವರಲ್ಲಿ ವಿಶ್ವಾಸ ತುಂಬುವಲ್ಲಿ ಶಿಕ್ಷಣ ತಜ್ಞರು ಮತ್ತು ಮಾನಸಿಕ ತಜ್ಞರು ಈ ಸಹಾಯವಾಣಿಯಲ್ಲಿ ನಿರತರಾಗಿದ್ದಾರೆ. ಅದರ ವಿವರಗಳು ಕೆಳಗಿನಂತಿವೆ. ವಿದ್ಯಾರ್ಥಿಗಳು ಗೊಂದಲ, ಖಿನ್ನತೆಗೊಳಗಾದಲ್ಲಿ ಈ ಸಹಾಯವಾಣಿಯ ಸಹಾಯ ಪಡೆದು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬಹುದು.

ಸಹಾಯವಾಣಿ ಸಂಖ್ಯೆಗಳು :
080 - 23468740 ಮತ್ತು 080 - 23468740

ಸಮಯ :
ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಇಲಾಖೆಯ ತಜ್ಞರಿಂದ.
ಮಧ್ಯಾಹ್ನ 1.30ರಿಂದ ಸಂಜೆ 5ರವರೆಗೆ ನಿಮ್ಹಾನ್ಸ್‌ನ ತಜ್ಞರಿಂದ.

ಈ ಸಹಾಯವಾಣಿ ಮಾರ್ಚ್ 14ರವರೆಗೆ ಮಾತ್ರ ತೆರೆದಿರುತ್ತದೆ. ವಿದ್ಯಾರ್ಥಿಗಳು ಅವರ ಪಾಲಕರು ತಜ್ಞರನ್ನು ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಪರೀಕ್ಷಾ ಪೇಪರುಗಳಲ್ಲಿ ಬರಲಿರಬಹುದಾದ ಪ್ರಶ್ನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಾರದಾಗಿ ಇಲಾಖೆಯ ಆಯುಕ್ತರು ವಿನಂತಿಸಿಕೊಂಡಿದ್ದಾರೆ.

ಶಿಕ್ಷಣ ಇಲಾಖೆ ತಜ್ಞರಿಗೆ ಕೆಳಗಿನ ವಿಷಯಗಳ ಬಗ್ಗೆ ಪ್ರಶ್ನೆ ಕೇಳಬಹುದು.

* ಹಾಲ್ ಟಿಕೆಟ್ ಕಳೆದುಹೋಗಿದ್ದರೆ ಅಥವಾ ಸಿಕ್ಕಿಲ್ಲದಿದ್ದರೆ
* ಪ್ರವೇಶ ಚೀಟಿಯಲ್ಲಿ ವಿಷಯ ತಪ್ಪಾಗಿ ನಮೂದಿಸಲಾಗಿದ್ದರೆ
* ಪ್ರವೇಶ ಚೀಟಿಯಲ್ಲಿ ಪಾಲಕರ ಹೆಸರು ತಪ್ಪಾಗಿದ್ದರೆ
* ಫೋಟೋ ಸರಿಯಾಗಿ ಪ್ರಿಂಟ್ ಆಗಿಲ್ಲದಿದ್ದರೆ ಅಥವಾ ಗುರುತಿಸಲು ಕಷ್ಟಕರವಾಗಿದ್ದರೆ
* ಸಿಇಟಿ ಬಗ್ಗೆ ಸಾಮಾನ್ಯ ಪ್ರಶ್ನೆಗಳು

ನಿಮ್ಹಾನ್ಸ ತಜ್ಞ ವೈದ್ಯರಲ್ಲಿ ಕೆಳಗಿನ ವಿಷಯಗಳ ಬಗ್ಗೆ ಪ್ರಶ್ನೆ ಕೇಳಬಹುದು.

* ಪರೀಕ್ಷೆ ತಯಾರಿ
* ಅಭ್ಯಾಸದ ನೈಪುಣ್ಯಗಳು
* ಪರೀಕ್ಷೆ ಭಯ
* ಸಮಯ ಪಾಲನೆ
* ನೆನಪಿನ ಶಕ್ತಿ ಹೆಚ್ಚಿಸುವಿಕೆ
* ಒತ್ತಡ ನಿಭಾಯಿಸುವುದು
* ಮುಂದಿನ ಭವಿಷ್ಯತ್ತಿನ ಬಗ್ಗೆ
* ಆ ಕ್ಷಣದಲ್ಲಿ ಆಗುವ ಗೊಂದಲದ ಬಗ್ಗೆ [ಪಿಯು ಪರೀಕ್ಷೆ ವೇಳಾಪಟ್ಟಿ] [ಎಸ್ಎಸ್ಎಲ್ ಸಿ ಪರೀಕ್ಷೆ ವೇಳಾಪಟ್ಟಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+