300 ಕೋಟಿಗೆ ಖೇಣಿ ಕಂಪನಿ ಷೇರು ಮಾರಿದ ಅಂಬಾನಿ

ಸುಮಾರು 300 ಕೋಟಿ ರು.ಗಳಿಗೆ ಶೇ8 ರಷ್ಟು ಷೇರುಗಳು ಬಿಕರಿಯಾಗಿದೆ. ಆದರೆ, ಅಂಬಾನಿ ಷೇರು ಮಾರಿದ್ದು ಏಕೆ ಎಂಬುದು ತಿಳಿದು ಬಂದಿಲ್ಲ.
ರಿಲಯನ್ಸ್ ಟೆಲಿಕಾಂ-ಫೈನಾನ್ಸ್ ಸಮೂಹದ ಒಡೆಯ ಬಿಎಂಐಸಿ ಯೋಜನೆ ಅಭಿವೃದ್ಧಿಪಡಿಸಿದ ನೈಸ್ ಕಂಪನಿಯಲ್ಲಿ ತಮ್ಮ ಷೇರುಗಳಲ್ಲಿ ಶೇ 8 ರಷ್ಟನ್ನು 65 ಮಿಲಿಯನ್ ಡಾಲರ್ ಗೆ ಮಾರಿದ್ದಾರೆ. ನೈಸ್ ನಲ್ಲಿ ಅಂಬಾನಿ ಒಟ್ಟು ಶೇ 15 ರಷ್ಟು ಬಂಡವಾಳ ಹೂಡಿಕೆ ಮಾಡಿದ್ದರು.
2005ರಲ್ಲಿ ಅಂಬಾನಿ ಶೇ 15 ರಷ್ಟು ನೈಸ್ ಷೇರುಗಳನ್ನು 60 ಕೋಟಿಗೆ ಕೊಂಡಿದ್ದರು. 7 ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚು ಲಾಭದೊಂದಿಗೆ ಷೇರುಗಳನ್ನು ಮಾರಿದ್ದಾರೆ. ಕಲ್ಯಾಣಿ ಗ್ರೂಪ್ ಆಫ್ ಕಂಪನೀಸ್ ಹಾಗೂ SAB ಇಂಟರ್ ನ್ಯಾಷನಲ್ ಲಿ ಬಿಎಂಐಸಿ ಯೋಜನೆ ನಿರ್ಮಿಸಿದೆ.ನೈಸ್ ಕಂಪನಿ ಮೌಲ್ಯ ಸುಮಾರು 4,000 ಕೋಟಿ ರು ಇದೆ.












Click it and Unblock the Notifications