ಕನ್ನಡಕ ಹಾಕಿರ್ಲಿಲ್ಲ; 'ಅದು' ಕಾಣಲಿಲ್ಲ- ಬ್ಲೂಬಾಯ್ಸ್

ಇಷ್ಟಕ್ಕೂ, ಪ್ರಧಾನ ಆರೋಪಿ ಸನ್ಮಾನ್ಯ ಸವದಿ ಸಾಹೇಬರು ಏನು ಹೇಳಿದ್ದಾರೆ ಅಂದರೆ... 'ಅದು' ವಿದೇಶಿ ಅಶ್ಲೀಲ ವಿಡಿಯೋ. 'ಅದರ' ಅವಧಿಯೂ ಕಡಿಮೆಯಿತ್ತು. ಇದರಾಚೆಗೂ ನನ್ನದು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ' ಎನ್ನುತ್ತಾ ಸಾಹೇಬರು ಆ ವಿಡಿಯೋ ದೃಶ್ಯಾವಳಿಗಳಿದ್ದ ಪೆನ್ ಡ್ರೈವ್ ಅನ್ನು ಸಮಿತಿ ಕೈಗೆ ಒಪ್ಪಿಸಿದ್ದಾರೆ.
ಸವದಿಯ ನೆರೆಹೊರೆಯವರಾದ ಸಿಸಿ ಪಾಟೀಲರು ನೀಡಿರುವ ಉತ್ತರ ಸಖತ್ ಮಜವಾಗಿದೆ - ಅಂದು ನಾನು ಕನ್ನಡಕ ಹಾಕಿಯೇ ಇರಲಿಲ್ಲ. ಕನ್ನಡಕ ಹಾಕಲಿಲ್ಲ ಅಂದರೆ ನನಗೆ 'ಅದು' ಕಾಣಿಸುವುದಿಲ್ಲ. ಶಿವಶಿವಾ!
ಇನ್ನು ಕೃಷ್ಣಪಾಲೇಮಾರ್ ಸಾಹೇಬರು ಏನು ಹೇಳಿದ್ದಾರೆಂದರೆ ... ಅಂದು ವಿಡಿಯೋ ನೋಡಿದ್ದು ನನ್ನ ಮೊಬೈಲಿನಲ್ಲಿ ಅಲ್ಲ. ಅಂದು ನಾನು ನನ್ನ ಮೊಬೈಲ್ ಅನ್ನು ಸದನಕ್ಕೆ ತಂದಿರಲಿಲ್ಲ.












Click it and Unblock the Notifications