ಪಂಜಾಬ್ : ಕತ್ತಿ ಝಳಪಿಸಿದ ಬಿಜೆಪಿ ಮೈತ್ರಿಕೂಟ

ಅಮೃತಸರ್, ಮಾ.6: ಆಡಳಿತಾರೂಢ ಶಿರೋಮಣಿ ಅಕಾಲ್ ದಳ(SAD) ಹಾಗೂ ಭಾರತೀಯ ಜನತಾ ಪಕ್ಷ(BJP) ಪಂಜಾಬ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಪಂಜಾಬ್ ನಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮೂಲಕ ಕಳೆದ 46 ವರ್ಷಗಳಲ್ಲಿ ಕಾಣಲಾಗದಿದ್ದ ಸಾಧನೆ ಮೆರೆದಿದ್ದಾರೆ.
ಬಿಜೆಪಿ ಮೈತ್ರಿಕೂಟ 63 ಸೀಟುಗಳನ್ನು ಗೆದ್ದಿದ್ದು, 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 45 ಸ್ಥಾನ ಗಳಿಸಿದ್ದು, 1 ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ. ಹೀಗಾಗಿ 117 ಅಸೆಂಬ್ಲಿ ಸೀಟುಗಳ ಪಂಜಾಬ್ ವಿಧಾನಸಭೆಯಲ್ಲಿ ಮತ್ತೆ ಬಿಜೆಪಿ ಮೈತ್ರಿಕೂಟ ತನ್ನ ಅಧಿಕಾರ ಸ್ಥಾಪಿಸಲಿದೆ.
ಮತ ಎಣಿಕೆ ಲೈವ್ ಸುದ್ದಿಗಾಗಿ ಅಯಾ ರಾಜ್ಯದ ಮೇಲೆ ಕ್ಲಿಕ್ ಮಾಡಿ : ಉತ್ತರ ಪ್ರದೇಶದ 403, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾ 40.
ಪ್ರಕಾಶ್ ಸಿಂಗ್ ಬಾದಲ್ ಹಾಗೂ ಅವರ ಪುತ್ರ ಸುಖ್ ಬೀರ್ ಸಿಂಗ್ ಬಾದಲ್ ಜಯಭೇರಿ ಬಾರಿಸಿದ್ದಾರೆ. ಮತ್ತೊಮ್ಮೆ ಪ್ರಕಾಶ್ ಸಿಂಗ್ ಬಾದಲ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ.












Click it and Unblock the Notifications