ಬೆಂಗಳೂರು: ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು,
ಮಾ.5: ಕೇಂದ್ರೀಯ ಸಶಸ್ತ್ರ ಪೋಲೀಸ್ (CRPF) ಪಡೆಯಲ್ಲಿ ಖಾಲಿ ಇರುವ 1,857 ಸಬ್‌ಇನ್ಸ್‌ಪೆಕ್ಟರ್ ಹಾಗೂ ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆಯಲ್ಲಿ (CISF) ಖಾಲಿ ಇರುವ 338 ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸಿಬ್ಬಂದಿ ನೇಮಕಾತಿ ಆಯೋಗ (SSC) ಅರ್ಜಿ ಆಹ್ವಾನಿಸಿದೆ. id="toptextpromo">ಅಭ್ಯರ್ಥಿಗಳು
ಪದವೀಧರರಾಗಿರಬೇಕು. ಪುರುಷ ಅಭ್ಯರ್ಥಿಗಳಾಗಿದ್ದಲ್ಲಿ ಕನಿಷ್ಠ 170 ಸೆಂ.ಮೀ. ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ. ಎತ್ತರವಿರಬೇಕು. 20ರಿಂದ 25 ರ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ, ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. id='are-slot-1' class='oiad oi-axt oiadv'> id='top-searched-articles'>ಅರ್ಜಿ
ಶುಲ್ಕವಾಗಿ 100 ರೂ. ಸಂದಾಯ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ನೀಡಬೇಕಾದ ಅಗತ್ಯವಿಲ್ಲ. ಅರ್ಜಿ ಸಲ್ಲಿಕೆಗೆ ಮಾರ್ಚ್ 16ರಂದು ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಸಲ್ಲಿಕೆ ವಿಧಾನ ಇನ್ನಿತರ ಸಂಪೂರ್ಣ ವಿವರಗಳಿಗೆ ವೆಬ್‌ಸೈಟ್ http://ssc.nic.in/SSC.html ನೋಡಬಹುದು.











Click it and Unblock the Notifications