ಮಲ್ಲಿಕಾ ಶೆರಾವತ್ ಮೇಲೆ ಶಿವಸೈನಿಕರ ದಾಳಿ
ಮುಂಬೈ,
ಮಾ.1: ಬಾಲಿವುಡ್ ಖ್ಯಾತ ನಟಿ ಮಲ್ಲಿಕಾ ಶೆರಾವತ್ ಅವರ ಮೇಲೆ ಶಿವಸೈನಿಕರು ದಾಳಿ ನಡೆಸಿದ್ದಾರೆ. ತೇಜ್ ಚಿತ್ರಕ್ಕಾಗಿ ಐಟಂ ಸಾಂಗಿನಲ್ಲಿ ಮಲ್ಲಿಕಾ ಶೆರಾವತ್ ನಟಿಸುತ್ತಿದ್ದಾಗ ಈ ಘಟನೆ ನಡೆದಿದೆ. ಶೂಟಿಂಗ್ ಸ್ಥಳದಲ್ಲಿ ಮಲ್ಲಿಕಾ ಶೆರಾವತ್ ಜತೆಗೆ ಸಮೀರಾ ರೆಡ್ಡಿ, ಕಂಗನಾ ರಾವತ್, ಅನಿಲ್ ಕಪೂರ್ ಮತ್ತು ಅಜಯ್ ದೇವಗನ್ ಸಹ ಸೆಟ್ ನಲ್ಲಿ ಇದ್ದರು. id="toptextpromo">ಮಹಾರಾಷ್ಟ್ರದಲ್ಲಿ
ಹಿಂದಿ ಸಿನಿಮಾಕ್ಕಾಗಿ ವಿದೇಶಿಗರು ಶೂಟಿಂಗ್ ಮಾಡುವುದಕ್ಕೆ ತಮ್ಮ ತೀವ್ರ ವಿರೋಧವಿದೆ ಎಂದು ಶಿವಸೈನಿಕರು ಈ ವೇಳೆ ರಂಪಾಟ ಮಾಡಿದರು ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>'ವಿದೇಶಿಗರನ್ನೊಳಗೊಂಡ
ಶಾಟ್ ಗಳು 2-3 ಇವೆಯಷ್ಟೆ. ಕೇವಲ ಒಂದು ಗಂಟೆ ಕಾಲ ಅವರು ಶೂಟಿಂಗಿನಲ್ಲಿ ಭಾಗವಹಿಸುತ್ತಾರೆ' ಎಂದು ಮನವಿ ಮಾಡಿದರು ಶಿವಸೈನಿಕರು ದಾಂಧಲೆ ನಡೆಸಿದ್ದಾರೆ. ವಾಸ್ತವವಾಗಿ ಲಂಡನ್ ಸೆಟ್ ಹಾಕಿ ಈ ಚಿತ್ರೀಕರಣ ನಡೆದಿತ್ತು. ಆದರೆ ಅದರಲ್ಲಿದ್ದ ವಿದೇಶೀ ಪಾತ್ರಧಾರಿಗಳೂ ಇಲ್ಲಿನವರೇ. ಆದರೂ ಶಿವಸೈನಿಕರು ವಿಕೋಪಕ್ಕೆ ಹೋದರು ಎನ್ನಲಾಗಿದೆ.











Click it and Unblock the Notifications