ಕರ್ನಾಟಕ ಅಸೆಂಬ್ಲಿ ಟಿವಿಗೆ ಸೂಕ್ತ ಹೆಸರು ಸೂಚಿಸಿ

ಅಸೆಂಬ್ಲಿ ಟಿವಿ ಮೂಲಕ ಕಲಾಪಗಳಲ್ಲಿ ನಡೆಯುವ ಚರ್ಚೆಗಳನ್ನು ನಂತರ ಖಾಸಗಿ ಸುದ್ದಿ ವಾಹಿನಿಗಳಿಗೆ ರವಾನಿಸುವ ವ್ಯವಸ್ಥೆ ಕಲ್ಪಿಸಬಹುದು. ಆದರೆ, ಪ್ರತ್ಯೇಕ ಚಾನಲ್ ಆರಂಭ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಸುರೇಶ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಮಾತ್ರ ಪ್ರತ್ಯೇಕ ಚಾನೆಲ್ ಪರ ಬಲವಾಗಿ ವಾದ ಮಂಡಿಸಿದ್ದಾರೆ.
ಸಚಿವರ ನೀಲಿ ಚಿತ್ರ ವೀಕ್ಷಣೆ ಪ್ರಕರಣದಿಂದ ಸರ್ಕಾರಕ್ಕೆ ಉಂಟಾದ ಮುಜುಗರವೇ ಖಾಸಗಿ ಚಾನಲ್‌ಗಳನ್ನು ದೂರವಿಡಲು ಮುಖ್ಯಕಾರಣ ಎಂಬುದು ಬಹಿರಂಗ ಸತ್ಯ. ಈ ಹಿನ್ನೆಲೆಯಲ್ಲಿ ಸಚಿವರು, ತಜ್ಞರು ಸುಧೀರ್ಘ ಚರ್ಚೆ ನಡೆಸಿ, ಸದನದಲ್ಲಿ ಖಾಸಗಿ ಸುದ್ದಿ ವಾಹಿನಿಗಳ ಪ್ರವೇಶಕ್ಕೆ ಎಷ್ಟರಮಟ್ಟಿಗೆ ನಿರ್ಬಂಧ ಹೇರಬಹುದು ಎಂದು ತೀರ್ಮಾನಕ್ಕೆ ಬರಲಾಗುತ್ತದೆ.
ಈ ಮಧ್ಯೆ ಹೊಸ ಅಸೆಂಬ್ಲಿ ಟಿವಿ ಆರಂಭವಾದರೆ ಅದಕ್ಕೆ ಏನು ಹೆಸರು ಇಡಬಹುದು. ಓದುಗರು ಧಾರಾಳವಾಗಿ ಹೆಸರುಗಳನ್ನು ಸೂಚಿಸಬಹುದು.
* ವಿಧಾನಸಭಾ ಚಾನೆಲ್(ವಾಹಿನಿ)
* ವಿಧಾನ ಪರಿಷತ್ ವಾಹಿನಿ
* ಅಸೆಂಬ್ಲಿ ಟಿವಿ
* ಬ್ಲೂ ಬಾಯ್ಸ್ ಟಿವಿ
* ಅಸೆಂಬ್ಲಿ ಕಲರ್ಸ್
* ವಯಸ್ಕರ ವಾಹಿನಿ
* ಜನಪ್ರತಿನಿಧಿ
* ಕರ್ನಾಟಕ ಡರ್ಟಿಪಿಕ್ಚರ್(ಕೆಡಿಪಿ) ಟಿವಿ
* ಕಲಾಪ ಪ್ರಲಾಪ
* ಸದನ ಕದನ
* ನಿಮ್ಮ ಟಿವಿ...ಇತ್ಯಾದಿ ಪಟ್ಟಿಯನ್ನು ಆಸಕ್ತರು ಮುಂದುವರೆಸಬಹುದು. ಡಿ.ಎಚ್ ಶಂಕರ ಮೂರ್ತಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲದ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.












Click it and Unblock the Notifications