ಕರ್ನಾಟಕ ಅಸೆಂಬ್ಲಿಗೆ ಪ್ರತ್ಯೇಕ ಟಿವಿ, ಬಿಸಿಬಿಸಿ ಚರ್ಚೆ

ಉಭಯ ಸದನಗಳ ಕಲಾಪಗಳ ನೇರ ಪ್ರಸಾರಕ್ಕೆ ಪ್ರತ್ಯೇಕ ಚಾನಲ್ ಆರಂಭಿಸಲು ಬಹುತೇಕ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಗ್ಗೆ 28 (ಮಂಗಳವಾರ)ರಂದು ಬೆಳಿಗ್ಗೆ 11.50ಕ್ಕೆ ವಿಧಾನಸೌಧದಲ್ಲಿ ಸಭೆ ಆರಂಭವಾಗಿದೆ.
ಸಭಾಪತಿ ಡಿ.ಎಚ್. ಶಂಕರಮೂರ್ತಿ ಕೇಂದ್ರ ಸರ್ಕಾರದ ಸ್ಪೀಕರ್ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್, ಸಭಾಪತಿ ಡಿ.ಎಚ್. ಶಂಕರಮೂರ್ತಿ, ಪ್ರಸಾರ ಭಾರತಿ ತಜ್ಞರು, ಭಾರತ ಎಲೆಕ್ಟ್ರಾನಿಕ್ ಲಿ., (ಬಿಇಎಲ್)
ತಜ್ಞರು, ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟಂಟ್
ಕಾರ್ಪೋರೇಷನ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಲೋಕಸಭಾ ವಾಹಿನಿ ಮಾದರಿ: ಲೋಕಸಭೆಯ ಮಾದರಿಯಲ್ಲೇ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕಲಾಪಗಳ ಚಿತ್ರೀಕರಣ ಮತ್ತು ಪ್ರಸಾರಕ್ಕೆ ಪ್ರತ್ಯೇಕ ಚಾನಲ್ ಸ್ಥಾಪಿಸಿ, ಆ ಮೂಲಕವೇ ಕಲಾಪಗಳಲ್ಲಿ ನಡೆಯುವ ಚರ್ಚೆಗಳನ್ನು ಖಾಸಗಿ ಸುದ್ದಿ ವಾಹಿನಿಗಳಿಗೆ ರವಾನಿಸುವ ಬಗ್ಗೆ ಚಿಂತನೆ ನಡೆಸಬಹುದು ಎಂದು ಶಂಕರಮೂರ್ತಿ ಅವರು ಪ್ರತಿಪಾದಿಸಿದ್ದರು.
ಆದರೆ, ಈ ವಿಚಾರವನ್ನು ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ತಳ್ಳಿಹಾಕಿದ್ದರು. ಇಂತಹ ಯಾವುದೇ ಪ್ರಸ್ತಾವ ಸದ್ಯಕ್ಕಿಲ್ಲ. ವಾಸ್ತವವಾಗಿ ಇದು ಅಂದುಕೊಂಡಷ್ಟು ಸುಲಭವಲ್ಲ. ಪ್ರತ್ಯೇಕ ಚಾನಲ್ ಆರಂಭಿಸಲು ಸಾಕಷ್ಟು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಸದ್ಯಕ್ಕೆ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕ್ರಮದಂತೆ ನಡೆಯಲಿದೆ ಎಂದು ಎಸ್. ಸುರೇಶ್‌ಕುಮಾರ್ ತಿಳಿಸಿದ್ದರು.












Click it and Unblock the Notifications