ಕುಕ್ಕೆ ಸುಬ್ರಹ್ಮಣ್ಯ ಅತ್ಯಧಿಕ ಆದಾಯ ಗಳಿಕೆಯ ದೇವಸ್ಥಾನ
ಸುಬ್ರಹ್ಮಣ್ಯ,
ಫೆ.23: ಇತ್ತೀಚೆಗಷ್ಟೇ ISO ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಧಾರ್ಮಿಕ ಸ್ಥಳಗಳಲ್ಲಿ ಅತ್ಯಂತ ಶ್ರೀಮಂತ ದೇವಸ್ಥಾನವೆಂಬ ಹೆಗ್ಗಳಿಕೆಗೆ ಗಳಿಸಿದೆ. ಆದಾಯ ಗಳಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ದೇವಸ್ಥಾನ ಈ ದಾಖಲೆ ನಿರ್ಮಿಸಿದೆ. id="toptextpromo">ಅಂದರೆ,
ಈ ದೇವಸ್ಥಾನದ ವಾರ್ಷಿಕ ಆದಾಯ 44.8225 ಕೋಟಿ ರೂಪಾಯಿ. ರಾಜ್ಯದಲ್ಲಿ ಮುಜರಾಯಿ ಇಲಾಖೆ ಅಧೀನದಲ್ಲಿ ಒಟ್ಟು 34,217 ದೇವಸ್ಥಾನಗಳಿವೆ. ಬೇರೆ ಮುಜರಾಯಿ ದೇವಸ್ಥಾನಗಳಿಗೆ ಹೋಲಿಸಿದರೆ ಕುಕ್ಕೆಗೆ ಬರುವ ಭಕ್ತರ ಸಂಖ್ಯೆಯೂ ಅತ್ಯಧಿಕ. 'ದೇವಸ್ಥಾನಕ್ಕೆ ಪ್ರತಿದಿನ ಅಂದಾಜು 2ರಿಂದ 5 ಸಾವಿರ ಭಕ್ತರು ದರ್ಶನಕ್ಕೆ ಬರುತ್ತಾರೆ. ಇಲ್ಲಿ ಸೇವೆ ಮತ್ತು ಹುಂಡಿ ರೂಪದಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತಿದೆ. ತಿಂಗಳಿಗೆ ಅಂದಾಜು 50ರಿಂದ 60 ಲಕ್ಷ ರೂ. ಕಾಣಿಕೆ ಬರುತ್ತದೆ' ಎಂದು ಕುಕ್ಕೆ ದೇವಳದ ನಿರ್ವಹಣಾಧಿಕಾರಿ ಎಚ್.ಎಂ. ಕಾಳಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇನ್ನು
ರಾಜ್ಯದ 2ನೇ ಶ್ರೀಮಂತ ಪುಣ್ಯಕ್ಷೇತ್ರ ಕೊಳ್ಳೆಗಾಲದ ಮಲೆ ಮಹದೇಶ್ವರ ಸ್ವಾಮಿ. ಇದೂ ಸಹ ISO ಮನ್ನಣೆ ಗಳಿಸಿದೆ. ಈ ಕ್ಷೇತ್ರದ ಆದಾಯ 26.5021 ಕೋಟಿ ರೂ. ಶ್ರೀಮಂತಿಕೆಯಲ್ಲಿ 3ನೇ ಸ್ಥಾನದಲ್ಲಿರುವ ಮುಜರಾಯಿ ದೇವಸ್ಥಾನ ಕುಂದಾಪುರದ ಶ್ರೀ ಕೊಲ್ಲೂರು ಮೂಕಾಂಬಿಕೆ. ಈ ದೇವಳದ ವಾರ್ಷಿಕ ಆದಾಯ 17.4844 ಕೋಟಿ ರೂ. ಇನ್ನೂ ಸಂಪತ್ತು ಗಳಿಕೆಯಲ್ಲಿ 4ನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ಈ ತೀರ್ಥಕ್ಷೇತ್ರದ ಆದಾಯ 10.07,89 ಕೋಟಿ ರೂ.ಕರಾವಳಿಯ
ಟಾಪ್
4/10
ಪುಣ್ಯಕ್ಷೇತ್ರ:
ರಾಜ್ಯದ
10
ಶ್ರೀಮಂತ
ದೇವಸ್ಥಾನಗಳ
ಪಟ್ಟಿಯಲ್ಲಿ
ಕರಾವಳಿ
ಭಾಗದ
ಒಟ್ಟು
4
ದೇವಸ್ಥಾನಗಳಿವೆ.
ಅಂದರೆ
ಧಾರ್ಮಿಕವಾಗಿ
ಅತಿಹೆಚ್ಚು
ಆದಾಯ
ಬರುವ
ದೇವಸ್ಥಾನ
ದಕ್ಷಿಣ
ಕನ್ನಡ
ಮತ್ತು
ಉಡುಪಿ
ಜಿಲ್ಲೆಯಲ್ಲಿವೆ.
ಇನ್ನು
ಖಾಸಗಿ
ಒಡೆತನದಲ್ಲಿರುವ
ದೇವಸ್ಥಾನಗಳಿಗೆ
ಹೋಲಿಸಿದರೂ
ಧರ್ಮಸ್ಥಳದ
ಶ್ರೀ
ಮಂಜುನಾಥೇಶ್ವರ
ಕೂಡ
ರಾಜ್ಯದ
ಅತ್ಯಂತ
ಶ್ರೀಮಂತ
ದೇವಸ್ಥಾನಗಳಲ್ಲಿ
ಒಂದು.
ಹೀಗಾಗಿ,
ಕರ್ನಾಟಕದಲ್ಲಿ
ಅತಿ
ಹೆಚ್ಚು
ಭಕ್ತಾದಿಗಳು
ಈ
ಎರಡು
ಜಿಲ್ಲೆ
ಪುಣ್ಯ
ಕ್ಷೇತ್ರಗಳಿಗೆ
ಭೇಟಿ
ನೀಡುತ್ತಿದ್ದಾರೆ.












Click it and Unblock the Notifications