85 ಲಕ್ಷ ಮಂದಿ ನೌಕರರಿಗೆ ಸಿಹಿ ಸುದ್ದಿ

ಇದುವರೆಗೂ ಆದಾಯ ತೆರಿಗೆ ಕಾಯಿದೆ 1961ರ ಅನುಸಾರ ಎಲ್ಲ ಉದ್ಯೋಗಿಗಳು ಆದಾಯ ತೆರಿಗೆ ಕಟ್ಟುವುದು ಕಡ್ಡಾಯವಾಗಿತ್ತು. 1.80 ಯಿಂದ 5 ಲಕ್ಷ ರುಪಾಯಿ ಸಂಬಳ ಪಡೆಯುವವರು ಶೇ. 10ರಷ್ಟು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ.
ಈ ಸಂಬಂಧ, ವಾರ್ಷಿಕವಾಗಿ 5 ಲಕ್ಷ ರೂ. ಆದಾಯ ಹೊಂದಿರುವ ನೌಕರರು ಈ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ದೇಶದಲ್ಲಿ 85 ಲಕ್ಷ ವೇತನ ಪಡೆಯುವ ನೌಕರರಿದ್ದು, ಅವರ ಆದಾಯದ ಮಿತಿ ವಾರ್ಷಿಕ 5 ಲಕ್ಷ ರೂ. ಗಿಂತಲೂ ಹೆಚ್ಚಿಲ್ಲ ಎಂದು ಅದು ಹೇಳಿದೆ.
ವಾರ್ಷಿಕ 5 ಲಕ್ಷ ರೂ. ಒಟ್ಟು ಆದಾಯ ಹೊಂದುವ ವ್ಯಕ್ತಿ ಅಥವಾ ವೇತನ ಪಡೆಯುವ ನೌಕಕರು ಹಾಗು ಫಿಕ್ಸೆಡ್ ಡೆಪಾಸಿಟ್ ಮತ್ತಿತರ ಖಾತೆಗಳ ಮೂಲಕ 10000 ರೂ. ಬಡ್ಡಿ ಪಡೆಯುವ ವ್ಯಕ್ತಿಗಳು 2012-13ನೆ ಹಣಕಾಸು ವರ್ಷದಿಂದ ಆದಾಯ ತೆರಿಗೆ ಕಟ್ಟುವ ಅಗತ್ಯವಿಲ್ಲ. ತಮ್ಮ ಮೇಲಧಿಕಾರಿಯಿಂದ ತೆರಿಗೆ ಕಡಿತ ಗೊಳಿಸುವ ಫಾರ್ಮ್ 16ರ ಪ್ರಮಾಣ ಪತ್ರವನ್ನು ಪಡೆದಿರುವ ವ್ಯಕ್ತಿಗಳಿಗೆ ಮಾತ್ರ ತೆರಿಗೆ ಪಾವತಿಯ ವಿನಾಯಿತಿಗೆ ಅನುಮತಿ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications