ಹೋಂವರ್ಕ್ ಮಾಡದ 6 ವರ್ಷದ ಕಂದಮ್ಮ ಇನ್ನಿಲ್ಲ

ಮೃತ ವಿದ್ಯಾರ್ಥಿ ಪಂಕಜ್, ರೋಹ್ಟಕ್‌ನ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆ ಆಸ್ಪತ್ರೆಯಲ್ಲಿ ಮೊನ್ನೆ ಭಾನುವಾರ ರಾತ್ರಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಶಿಕ್ಷಕಿಯ ಕೃತ್ಯದಿಂದ ತೀವ್ರ ಆಘಾತಗೊಂಡಿದ್ದ ಮಗುವನ್ನು ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು. .
ಹೋಂವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಡಿಸೆಂಬರ್ 27ರಂದು ಶಾಲೆಯ ಶಿಕ್ಷಕಿ ದುರ್ದೈವಿ ಹುಡುಗನನ್ನು ಕತ್ತಲು ಕೋಣೆಯೊಳಗೆ ಕೂಡಿ ಹಾಕಿದ್ದರು. ಶಿಕ್ಷಕಿಯು ಶಾಲೆ ಬಿಟ್ಟು ಹೋಗಿದ್ದರು. ತುಂಬಾ ಹೊತ್ತಾದರೂ ಮನೆಗೆ ಮರಳದ ಬಾಲಕನನ್ನು ಹುಡುಕಿಕೊಂಡು ಬಂದಿದ್ದ ಆತನ ಹಿರಿಯ ಸಹೋದರಿಗೆ ಮಗು ಪ್ರಜ್ಞೆ ತಪ್ಪಿ ಬೀಗ ಹಾಕಿದ್ದ ಕೋಣೆಯಲ್ಲಿ ಬಿದ್ದಿರುವುದನ್ನು ಕಂಡುಬಂದಿತು.
ಅಲ್ಲಿಂದಾಚೆಗೆ ಆಘಾತಗೊಂಡ ಬಾಲಕ, ಸರಿಯಾಗಿ ಊಟ ಮಾಡುವುದನ್ನೇ ನಿಲ್ಲಿಸಿದ್ದ. ಬಳಿಕ ಅನಾರೋಗ್ಯ ಪೀಡಿತನಾದ. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ರೋಹ್ಟಕ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.












Click it and Unblock the Notifications