ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಸಾವಿರ ವೆಬ್ ತಾಣಗಳನ್ನು ಮುಚ್ಚಿದ ಚೀನಾ

By Mahesh
|
Google Oneindia Kannada News

China Websites Shut Down
ಬೀಜಿಂಗ್, ಫೆ.22: ಚೀನಾ ಐಟಿ ಸಚಿವಾಲಯದ ಆದೇಶದ ಮೇರೆಗೆ ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಸುಮಾರು 8,000 ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಲಾಗಿದೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ಸುಮಾರು 13,000ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಮುಚ್ಚಲಾಗಿತ್ತು. ಬೆಂಗಳೂರು ಮೂಲದ ಜನಾಗ್ರಹ ಸಂಸ್ಥೆ ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಚೀನಾ, ವೆಬ್ ಸೈಟ್ ಆಂದೋಲನ ಆರಂಭಿಸಿದ್ದನ್ನು ಸ್ಮರಿಸಬಹುದು.

Xinhua ವರದಿ ಪ್ರಕಾರ, ಆನ್ ಲೈನ್ ಕಾಳಧನ ಮಾರುಕಟ್ಟೆ ವಿರುದ್ಧದ ಅಭಿಯಾನದ ಫಲವಾಗಿ ಸುಮಾರು 8,000ಕ್ಕೂ ಅಧಿಕ ತಾಣಗಳನ್ನು ಮುಚ್ಚಲಾಗಿದೆ.

ಈ ವೆಬ್ ತಾಣಗಳಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಮಾರಾಟ, ಸ್ಫೋಟಕ, ವಿಷಕಾರಿ ರಾಸಾಯನಿಕ, ಎಲೆಕ್ಟ್ರಾನಿಕ್ ಸಾಧನಗಳು, ಉನ್ನತ ತಂತ್ರಜ್ಞಾನವುಳ್ಳ ಮೊಬೈಲ್ ಗಳಲ್ಲದೆ ಪ್ರಮುಖ ವ್ಯಕ್ತಿಗಳ ಮಾಹಿತಿಗಳು ಕೂಡಾ ಅತ್ಯಧಿಕ ಮೊತ್ತಕ್ಕೆ ಬಿಕರಿಯಾಗುತ್ತಿತ್ತು ಎಂಬ ಆರೋಪವಿದೆ.

ಸುಮಾರು 53 ಕ್ರಿಮಿನಲ್ ಗುಂಪು ಹಾಗೂ 905 ಆರೋಪಿಗಳನ್ನು ಐಟಿ ಸಚಿವಾಲಯ ಗುರುತಿಸಿದೆ. ಸುಮಾರು 1.2 ದಶಲಕ್ಷ ಆನ್ ಲೈನ್ ದಾಖಲೆಗಳನ್ನು ನಾಶಪಡಿಸಲಾಗಿದೆ.

English summary
Chinese authorities have shut down nearly 8,000 websites in China, said the government. The websites were shut following illegal commercial activity hosted by them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X