ಸದಾನಂದ ಗೌಡರು ಸಾಕಿಕೊಂಡಿರುವ ಬಿಳಿ ಆನೆಗಳು

ಈ ಅಧಿಕಾರಿಗಳದು ಒಂದು ತೂಕವಾದರೆ, ಅವರು ತಿಂಗಳಿಗೆ ಪಡೆಯುತ್ತಿರುವ ಸಂಬಳ ಮತ್ತೊಂದು ತೂಕದ್ದು. ಅವರೆಲ್ಲ ಸೇರಿ ಅನಾಮತ್ 70 ಲಕ್ಷ ರು. ಸಂಬಳವನ್ನು ಬೊಕ್ಕಸದಿಂದ ಅಧಿಕೃತವಾಗಿ ಕಬಳಿಸುತ್ತಿದ್ದಾರೆ. 287 ಅಧಿಕಾರಿಗಳಲ್ಲಿ 237 ಜನರು ವಿಧಾನಸೌಧದಲ್ಲಿ, 21 ಜನರು ಮನೆಕಚೇರಿಯಲ್ಲಿ ಮತ್ತು 29 ಜನರು ಗೃಹೋಪಯೋಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನೇಮಕಾತಿಯ ಮೇಲೆ ಹಿಡಿತವಿಲ್ಲದ ಕಾರಣ ಕಂಡುಕೇಳರಿಯದ ಸಂಖ್ಯೆಯ ಅಧಿಕಾರಿಗಳು ಸಿಎಂ ಅಡಿಯಲ್ಲಿ ಕರ್ತವ್ಯನಿರತರಾಗಿದ್ದಾರೆ. ಇವರಲ್ಲಿ ಉನ್ನತ ಅಧಿಕಾರದಲ್ಲಿ ಇರುವವರು ಹೆಚ್ಚಿನವರು ಐಎಎಸ್ ಅಧಿಕಾರಿಗಳು. ಗೌಡರ ಪ್ರಧಾನ ಕಾರ್ಯದರ್ಶಿಯಾಗಿರುವ ಐಎಸ್ಎನ್ ಪ್ರಸಾದ್ ಅವರು 1.3 ಲಕ್ಷ ರು.ಯನ್ನು ಎಣಿಸಿಕೊಳ್ಳುತ್ತಿದ್ದಾರೆ. ಇನ್ನೊಬ್ಬ ಪ್ರಧಾನ ಕಾರ್ಯದರ್ಶಿ ಎಂ ಲಕ್ಷ್ಮಿನಾರಾಯಣ 1 ಲಕ್ಷ ರು. ಜೇಬಿಗಿಳಿಸುತ್ತಿದ್ದಾರೆ.
ಅಧಿಕಾರಿಗಳೆಲ್ಲ ನಿರ್ವಹಿಸುತ್ತಿರುವ ಇಲಾಖೆಗಳು ಹೀಗಿವೆ : ಆಡಳಿತ, ಅಭಿವೃದ್ಧಿ, ಮುಖ್ಯಮಂತ್ರಿ ಪರಿಹಾರ ನಿಧಿ, ನಾಮನಿರ್ದೇಶನ, ಭಾರತ ಸರಕಾರ ವಿಭಾಗ, ಕಂಪ್ಯೂಟರ್, ಮಾಧ್ಯಮ, ಜನಸ್ಪಂದನ ಮುಂತಾದವು. ಸುಮಾರು 16 ಖಾತೆಗಳನ್ನು ಹೆಗಲ ಮೇಲೆ ಹೊತ್ತಿರುವ ಸದಾನಂದ ಗೌಡರಿಗೆ ಅಷ್ಟಾದರೂ ಅಧಿಕಾರಿಗಳು ಕೈಕೆಳಗೆ ಇರಬೇಡವೆ?












Click it and Unblock the Notifications