ಬೆಂಗಳೂರಿನಲ್ಲಿ ಕಾಫಿಗೂ ಬಂತು ಪ್ರೀಪೇಯ್ಡ್ ಕಾರ್ಡು
ಬೆಂಗಳೂರು,
ಫೆ.17: ಬೆಳಗ್ಗೆ ಚುಮು ಚುಮು ಚಳಿ ಇರಲಿ ಬಿಡಲಿ ಹಬೆಯಾಡುತ್ತಿರುವ ಒಂದು ಕಪ್ ಬಿಸಿಬಿಸಿ ಕಾಫಿ ಗಂಟಲಿಗಿಳಿದರೇನೆ ಶುಭೋದಯ. ಕೆಲವರಿಗಂತೂ ಬೆಳಗಿನ ಕಾಫಿ ಇಲ್ಲದಿದ್ದರೆ ಬೆಳಕರಿಯುವುದೇ ಇಲ್ಲ. ಇರಲಿ ಈಗ ನೇರವಾಗಿ ವಿಷಯಕ್ಕೆ ಬರೋಣ. ದೇಶದಲ್ಲೇ ಅತಿ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿರುವ 'ಕೆಫೆ ಕಾಫಿ ಡೇ' ತನ್ನ ಬಳಕೆದಾರರಿಗಾಗಿ ಮೊಟ್ಟಮೊದಲ ಬಾರಿಗೆ 'ಕೆಫೆ ಮೊಮೆಂಟ್ಸ್' ಹೆಸರಿನ ಪ್ರೀಪೇಯ್ಡ್ ಕಾರ್ಡ್‌ಗಳನ್ನು ಹೊರತಂದಿದೆ. id="toptextpromo">ಬೆಂಗಳೂರಿನ
ಕಾಫಿ ಡೇ ಸ್ಕ್ವೇರ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಕೆ ರಾಮಕೃಷ್ಣ ಪ್ರೀಪೇಯ್ಡ್ ಕಾರ್ಡುಗಳನ್ನು ಬಿಡುಗಡೆ ಮಾಡಿದರು. ಈ ಕಾರ್ಡ್‌ಗಳನ್ನು ರು.100ರಿಂದ ರು.5001ರವರೆಗೂ ರೀಚಾರ್ಜ್ ಮಾಡಿಕೊಳ್ಳಬಹುದು. ರೀಚಾರ್ಜ್ ಮಾಡಿಕೊಂಡ ಕಾರ್ಡುಗಳು ಒಂದು ವರ್ಷದವರೆಗೂ ವ್ಯಾಲಿಡಿಟಿ ಹೊಂದಿರುತ್ತವೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನ
ಪ್ರತಿ ಔಟ್‌ಲೆಟ್‌ನಲ್ಲೂ ಈ ಕಾರ್ಡುಗಳನ್ನು ರೀಚಾರ್ಜ್ ಮಾಡಿಕೊಳ್ಳುವ ಸದುಪಾಯವನ್ನು ಕಲ್ಪಿಸಲಾಗಿದೆ. ಸದ್ಯಕ್ಕೆ ಈ ಕಾರ್ಡುಗಳು ಬೆಂಗಳೂರಿನಲ್ಲಿ ಮಾತ್ರ ಚಲಾವಣೆಯಾಗುತ್ತವೆ. ಮೇ ತಿಂಗಳ ಅಂತ್ಯಕ್ಕೆ ದೇಶದಾದ್ಯಂತ ಬಳಕೆಯಾಗುವಂತೆ ಯೋಜನೆ ರೂಪಿಸುತ್ತಿರುವುದಾಗಿ ರಾಮಕೃಷ್ಣ ತಿಳಿಸಿದ್ದಾರೆ. ಒಟ್ಟಿನಲ್ಲಿ ರೀಚಾರ್ಜ್ ಮಾಡಿಕೊಳ್ಳಿ, ಕಾಫಿ ಹೀರಿಕೊಳ್ಳಿ. (ಒನ್‌ಇಂಡಿಯಾ ಕನ್ನಡ)











Click it and Unblock the Notifications