ಇರಾನ್ ಅಣ್ವಸ್ತ್ರ ಪರೀಕ್ಷೆ, ವಿ ಡೋಂಟ್ ಕೇರ್ : ಯುಎಸ್

ಇರಾನ್ ದೇಶದ ಅಣ್ವಸ್ತ್ರ ಸಾಮರ್ಥದ ಬಗ್ಗೆ ಇರಾನ್ ರಾಷ್ಟ್ರಾಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಹರ್ಷ ವ್ಯಕ್ತಪಡಿಸಿದ್ದು, ಯುರೋಪ್ ರಾಷ್ಟ್ರಗಳ ಜೊತೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧವಾಗಿರುವುದಾಗಿ ಘೋಷಿಸಿದ್ದಾರೆ.
ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಚೀನಾ ಬಹಿರಂಗ ಬೆಂಬಲ ಘೋಷಿಸಿದೆ. ಅಣುಸ್ಥಾವರಕ್ಕೆ ದೇಶಿಯವಾಗಿ ನಿರ್ಮಿಸಿದ ಸಂವರ್ಧಿತ ಇಂಧನದ ಸಲಾಕೆಯನ್ನು ಭರ್ತಿ ಮಾಡುವ ದೃಶ್ಯ ಅಮೆರಿಕಕ್ಕೆ ಆತಂಕ ತಂದಿದೆ. ಇರಾನ್ ಬ್ಯಾಂಕ್ ಗಳ ಮೇಲೆ ಅಮೆರಿಕ ಇನ್ನಷ್ಟು ನಿರ್ಬಂಧ ಹೇರಿದೆ.
ಈ ಮಧ್ಯೆ ನೆದರ್‌ಲೆಂಡ್ಸ್, ಸ್ಪೇನ್, ಇಟಲಿ, ಫ್ರಾನ್ಸ್, ಗ್ರೀಸ್, ಪೋರ್ಚುಗಲ್‌ಗಳಿಗೆ ಇಂಧನ ರಫ್ತು ನಿಲ್ಲಿಸಲಾಗಿದೆ ಎಂಬ ಸುದ್ದಿಯನ್ನು ಇರಾನ್ ತಳ್ಳಿಹಾಕಿದೆ.
ಆದರೆ, ಐರೋಪ್ಯ ಒಕ್ಕೂಟವು ವ್ಯಾಪಾರ- ವಹಿವಾಟು ನಿಷೇಧಿಸಿದರೆ ಇರಾನ್ ಕೂಡಾ ಕಚ್ಚಾವಸ್ತು ಒದಗಿಸುವುದನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications