ಭಾರತ ಬೇಡ: ಅಮೆರಿಕ ಕಂಪನಿಗಳಿಗೆ ಒಬಾಮ ತಾಕೀತು

ಕುಶಲ ಕಾರ್ಮಿಕರಿಗಾಗಿ ಭಾರತದಂತಹ ರಾಷ್ಟ್ರಗಳತ್ತ ಮುಖ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಅಮೆರಿಕದಲ್ಲೇ ತರಬೇತಿಗೊಳಿಸಬೇಕಾದ ಶಾಲೆ ಹಾಗೂ ಶಿಕ್ಷಕರನ್ನು ಒದಗಿಸಲು ತಾನು ಸಿದ್ಧ ಎಂದು ಅವರು ಭರವಸೆ ನೀಡಿದ್ದಾರೆ.
'ಉದ್ಯೋಗದಾತರು ಇಂದು ಅತಿ ಹೆಚ್ಚು ಕುಶಲತೆಯ ಹಾಗೂ ಶಿಕ್ಷಿತ ಕಾರ್ಮಿಕರನ್ನು ಎದುರು ನೋಡುತ್ತಿದ್ದಾರೆ. ಇಂತಹ ಕಾರ್ಮಿಕರಿಗಾಗಿ ಅವರು ಭಾರತ ಹಾಗೂ ಚೀನಾದಲ್ಲಿ ತಡಕಾಡುವುದನ್ನು ನಾನು ಅಪೇಕ್ಷಿಸುವುದಿಲ್ಲ. ಅಂತಹ ಕಾರ್ಮಿಕರನ್ನು ಉದ್ಯಮಗಳು ಇಲ್ಲಿ ಅಮೆರಿಕದಲ್ಲಿಯೇ ಕಂಡುಕೊಳ್ಳಬೇಕು' ಎಂದು ಒಬಾಮ ತಿಳಿಸಿದ್ದಾರೆ.
ಅಮೆರಿಕದಲ್ಲಿಯೇ ಉದ್ಯೋಗಗಳನ್ನು ಸೃಷ್ಟಿಸುವ ಕಂಪನಿಗಳಿಗೆ ತನ್ನ ಆಡಳಿತವು ಉತ್ತೇಜಕಗಳನ್ನು ನೀಡಲಿದೆ ಎಂದು ಕಳೆದ ಬಾರಿ ಸದನದಲ್ಲಿ ಮಾಡಿದ ಭಾಷಣದಲ್ಲಿ ಒಬಾಮ ತಿಳಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications