Get Updates
Get notified of breaking news, exclusive insights, and must-see stories!

ಸ್ಟೀವ್ ಜಾಬ್ಸ್ ಮೋಸಗಾರನಾ, ಸುಳ್ಳುಗಾರನಾ?

steve-jobs-drug-addict-liar-fbi
ವಾಷಿಂಗ್ಟನ್, ಫೆ.12: ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಕುರಿತು ಎಫ್‌ಬಿಐ ಕೆಲವೊಂದು ಕುತೂಹಲಕಾರಿ ಮಾಹಿತಿಗಳನ್ನು ಬಿಡುಗಡೆ ಮಾಡಿದೆ. 1960 ಮತ್ತು 70ರ ದಶಕದಲ್ಲಿ ಕಾನೂನುಬಾಹಿರವಾಗಿ ಮಾದಕದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ಜಾಬ್ಸ್ ಅವರ ಅಂದಿನ ಗೆಳೆಯರೊಬ್ಬರು ಎಫ್‌ಬಿಐಗೆ ತಿಳಿಸಿದ್ದರು.

ಜಾಬ್ಸ್ ಜೀವನಚರಿತ್ರೆಯ ದಶಕದಷ್ಟು ಹಳೆಯದಾದ 191 ಪುಟಗಳಷ್ಟು ಸುದೀರ್ಘವಾದ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ (Freedom of Information Act) ಎಫ್‌ಬಿಐ ಗುರುವಾರ ಬಿಡುಗಡೆ ಮಾಡಿದೆ. ಈ ವರದಿಯು ಜಾಬ್ಸ್ ಅವರ ನೈತಿಕತೆಯ ಬಗ್ಗೆ ಜನರು ಅನುಮಾನ ಪಡುವಂತೆ ಮಾಡಿದೆ.

ಜಾಬ್ಸ್ ಮಾದಕದ್ರವ್ಯ ವ್ಯಸನಿಯಾಗಿದ್ದರು ಎನ್ನಲಾದ ಅಂಶವನ್ನು ಈ ಮಾಹಿತಿ ಒಳಗೊಂಡಿದೆ. ಅಲ್ಲದೇ ಅವರು ಸತ್ಯವನ್ನು ವಿರೂಪಗೊಳಿಸುತ್ತಿದ್ದರು ಮತ್ತು ತಮ್ಮ ಗುರಿ ಸಾಧನೆಗೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದ್ದರು ಎಂಬ ವಿವರಗಳೂ ಈ ವರದಿಯಲ್ಲಿ ಇವೆ. ಜಾಬ್ಸ್ ಮೂಲತಃ ಪ್ರಾಮಾಣಿಕ ಮತ್ತು ನಂಬಿಗಸ್ಥ ವ್ಯಕ್ತಿ . ಆದರೆ ಅವರ ವ್ಯಕ್ತಿತ್ವ ತುಂಬ ಸಂಕೀರ್ಣವಾದುದು ಎಂದು ಹೇಳಿದ ವರದಿ, ಅವರ ನೈತಿಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು.

1991ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರು ಜಾಬ್ಸ್ ಅವರನ್ನು ಅಧ್ಯಕ್ಷರ ಪರಿಣತರ ಮಂಡಳಿಗೆ ನೇಮಕ ಮಾಡಲು ಪರಿಗಣಿಸಿದ್ದ ಸಂದರ್ಭದಲ್ಲಿ ಎಫ್‌ಬಿಐಗೆ ಜಾಬ್ಸ್ ಹಿನ್ನೆಲೆ ತಿಳಿಯುವಂತೆ ಸೂಚಿಸಲಾಗಿತ್ತು. ಜಾಬ್ಸ್ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಅವರ ನೆರೆಹೊರೆಯವರನ್ನು ಸಂದರ್ಶಿಸಿ, ವ್ಯಾಪಕ ಸಂಶೋಧನೆ ನಡೆಸಿ ಈ ವರದಿಯನ್ನು ತಯಾರಿಸಲಾಗಿದೆ ಎಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+