Q3: ಶುಭ್ ಜ್ಯುವೆಲ್ಲರಿಗೆ 114.7ಕೋಟಿ ರು ನಿವ್ವಳ ಲಾಭ

ಕಳೆದ ವರ್ಷದ ವರಮಾನಕ್ಕೆ ಹೋಲಿಸಿದರೆ ಇದೊಂದು ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ ಹೇಳಿದ್ದಾರೆ. ರಫ್ತು ಹೆಚ್ಚಳ ಮತ್ತು ಚಿನ್ನಾಭರಣಗಳ ಚಿಲ್ಲರೆ ವಹಿವಾಟಿನಲ್ಲಿನ ಹೆಚ್ಚಳದಿಂದ ದಾಖಲೆ ಪ್ರಮಾಣ ವಹಿವಾಟು ಸಾಧಿಸಲಾಗಿದೆ.
ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಮಾರಾಟ ಮೌಲ್ಯ ಶೇ 26ರಷ್ಟು ಜಿಗಿತ ಕಂಡಿದ್ದು 6,518 ಕೋಟಿ ರು.ನಷ್ಟು ವಹಿವಾಟು ನಡೆದಿದೆ.
ರಾಜ್ಯದಲ್ಲಿನ 70 ಶುಭ್ ಮಳಿಗೆಗಳಲ್ಲಿ ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಕರ್ನಾಟಕ ಇನ್ನೂ 55 ರೀಟೈಲ್ ಮಳಿಗೆಗಳನ್ನು ಆರಂಭಿಸಲಾಗುವುದು. 2014ರ ಸುಮಾರಿಗೆ ದಕ್ಷಿಣ ಭಾರತದಲ್ಲಿ 500 ಮಳಿಗೆಗಳನ್ನು ಹೊಂದಲು ಸಂಸ್ಥೆ ಯೋಜನೆ ಹಾಕಿಕೊಂಡಿದೆ.












Click it and Unblock the Notifications