ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ

Fraud Case Cask Mangalore
ಮಂಗಳೂರು, ಫೆ.8: ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ (ಕಾಸ್ಕ್) ಸಂಘಟನೆಯ ವಿರುದ್ಧ ತೆರಿಗೆ ವಂಚನೆ ಆರೋಪ ಹೊರೆಸಲಾಗಿದೆ. ಮಂಗಳೂರಿನ ಬಿಷಪ್ ಮಹಾ ಪೋಷಕರಾಗಿರುವ ಈ ಸಂಘಟನೆಯ ತನಿಖೆಗೆ ಆದಾಯ ತೆರಿಗೆ ಇಲಾಖೆ

ನಾಮನಿರ್ದೇಶಿತ ಪ್ರತಿನಿಧಿ ಮಾರ್ಸೆಲ್ ಮಾಂಟ್ರಿಯೋ ಹಾಗೂ ಕಾಸ್ಕ್ ನ ಅಧ್ಯಕ್ಷ ಡೆರೆಕ್ ಲೋಬೋ ಮೂರು ಸುತ್ತೋಲೆಗಳನ್ನು ಹೊರಡಿಸಿದ್ದು 1/6/2011ರ ಸುತೋಲೆಯಲ್ಲಿ ಮದ್ಯದ ಮಾರಾಟದಿಂದ 6,38,600/- ರೂಗಳ ಆದಾಯವನ್ನು ಘೋಷಿಸಿದ್ದರು.

6/6/2011ರ ಸುತ್ತೋಲೆಯ ಮೂಲಕ ಅಮೆರಿಕ ಮತ್ತು ಕೆನಡಾಗಳಲ್ಲಿರುವ ಕ್ರೈಸ್ತ ಬಾಂಧವರಿಂದ ಶತಮಾನೋತ್ಸ ನಿಧಿ 11900 ಡಾಲರ್ ಗಳಿಸಿರುವುದಾಗಿಯೂ, 9/6/2011ರ ಸುತ್ತೋಲೆಯ ಮೂಲಕ 1 ಕೋಟಿ ರೂಗಳ ದೇಣಿಗೆ ಪಡೆದಿರುವುದಾಗಿಯೂ ಘೋಷಿಸಿದ್ದರು.

ಒಟ್ಟು 2 ಕೋಟಿ ರೂಗಳಿಗೂ ಮೀರುವ ಈ ಹಣದ ಸ್ವೀಕೃತಿಯನ್ನು ಲೆಕ್ಕಪತ್ರಗಳಲ್ಲಿ ತೋರಿಸಿಯೂ ಇಲ್ಲ ಮತ್ತು ತೆರಿಗೆಯನ್ನೂ ಪಾವತಿಸಿಲ್ಲ ಎಂದು ತಿಳಿದುಬಂದಿದೆ. ಈ ಹಣವನ್ನು ಸಂಘದ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರ ಹೆಸರಿನಲ್ಲಿ ಠೇವಣಿ ಇಡುವ ಇರಾದೆ ಹೊಂದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಆದಾಯ ತೆರಿಗೆ ಇಲಾಖೆ ಸಂಘದ ಸಮಿತಿ ಸದಸ್ಯರು, ಪದಾಧಿಕಾರಿಗಳು ಮತ್ತು ಮಂಗಳೂರಿನ ಬಿಷಪ್ ಅವರನ್ನು ವ್ಯಕ್ತಿಗತವಾಗಿ ತನಿಖೆಗೆ ಒಳಪಡಿಸಲಾಗುವುದೆಂದು ಹೇಳಿದೆ. ವೈಯಕ್ತಿಕವಾಗಿ ಮತ್ತು ಸಂಘಟಿತರಾಗಿ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+