ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಾದೇಶ್ವರಕ್ಕೆ ISO ಸ್ಥಾನಮಾನ
ಕುಕ್ಕೆ
ಸುಬ್ರಹ್ಮಣ್ಯ, ಫೆ.1: ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಲೆ ಮಾದೇಶ್ವರ ದೇವಸ್ಥಾನಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ ಲಭಿಸಿದೆ ಎಂದು ಮುಜರಾಯಿ ಇಲಾಖೆ ಆಯುಕ್ತ ಬಿ.ಜಿ. ನಂದಕುಮಾರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳಿಗೆ ಇಂತಹ ಮಾನ್ಯತೆ ಪ್ರಾಪ್ತಿಯಾಗಿರುವುದು ಇದೇ ಮೊದಲು. ನೆರೆಯ ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿವಿಧ ದೇವಸ್ತಾನಗಳಿಗೆ ಐಎಸ್ಒ ಮಾನ್ಯತೆ ದೊರಕಿದೆ. id="toptextpromo">ಕುಕ್ಕೆ
ಸುಬ್ರಮ್ಹಣ್ಯ ದೇವಸ್ಥಾನದ ಆಡಳಿತ ವ್ಯವಸ್ಥೆಗಳನ್ನು ಪರಿಶೀಲಿಸಿದ ಆಂಗ್ಲೋ ಜಪಾನೀಸ್ ಅಮೆರಿಕನ್ ರಿಜಿಸ್ಟ್ರೇಶನ್ ಸಂಸ್ಥೆಯು ಐಎಸ್‌ಒ 9001-2008 ಪ್ರಮಾಣಪತ್ರವನ್ನು ದೇವಸ್ಥಾನಕ್ಕೆ ನೀಡಿದೆ. ರಾಜ್ಯದಲ್ಲೇ ಅತ್ಯಧಿಕ ವಾರ್ಷಿಕ ವರಮಾನವುಳ್ಳ ದೇವಾಲಯ ಇದಾಗಿದೆ. (ಮಲೆ ಮಹದೇಶ್ವರ) id='are-slot-1' class='oiad oi-axt oiadv'> id='top-searched-articles'>1991ರ
ಜಾಗತೀಕರಣದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಖಾಸಗಿ ಕಂಪನಿಗಳಿಗೆ ಈ ISO ಸ್ಥಾನಮಾನ ಗಳಿಸುವುದು ಅನಿವಾರ್ಯವಾಗಿತ್ತು. ಅದರಿಂದ ಎಷ್ಟು ಕಂಪನಿಗಳ ವ್ಯಾಪಾರಾಭಿವೃದ್ಧಿಯಾಯಿತು ಎಂಬುದು ಪ್ರಶ್ನಾರ್ಹವಾದರೂ ಮುಂದೆ, ಅದು ಸರಕಾರಿ ಸಂಸ್ಥೆಗಳಿಗೂ ಶೋಕಿಯಾಗಿತ್ತು. ಸರಕಾರಿ ಸಂಸ್ಥೆಗಳಲ್ಲೂ ಕಾರ್ಪೊರೇಟ್ ಕಲ್ಚರ್ ಕಾಲಿಟ್ಟು ಐಎಸ್ಒ ಪಟ್ಟ ಗಿಟ್ಟಿಸಲಾರಂಭಿಸಿದವು. ಆದರೆ ಇತ್ತೀಚೆಗೆ ಅನೇಕ ದೇವಸ್ಥಾನಗಳೂ ನಾಮುಂದುತಾಮುಂದು ಎಂದು ISO ಸ್ಥಾನಮಾನ ಗಳಿಸುತ್ತಿವೆ.











Click it and Unblock the Notifications