'ರಾಹುಲ್ ವೆಬ್‌ಸೈಟ್': ಪಾಕ್ ಪಾಲಾಗಿರುವ ಕಾಶ್ಮೀರ!
ನವದೆಹಲಿ,ಜ.30:
ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಒಂದು ಸರಷ್ಟಿಯಾಗಿದ್ದು ಅದರಲ್ಲಿ ಭಾರತದ ಅಖಂಡ ಭಾಗವಾದ ಕಾಶ್ಮೀರವನ್ನು ಪಾಕಿಸ್ತಾನದ ಭಾಗ ಎಂದು ತೋರಿಸುವ ಭೂಪಟ ರಾರಾಜಿಸುತ್ತಿದೆ! ಇದು ಅಂತರ್ಜಾಲ ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. id="toptextpromo">www.rahulgandhi.co.in
ಹೋಂ ಪೇಜಿನಲ್ಲಿ ಈ 'ಕರಾ'ಮತ್ತು ನಡೆದಿದೆ. ಆದರೆ ಪಕ್ಷದ ಮೂಲಗಳ ಪ್ರಕಾರ ರಾಹುಲ್ ಗಾಂಧಿಗೂ ಈ ವೆಬ್‌ಸೈಟಿಗೂ ಯಾವುದೇ ಸಂಬಮಧವಿಲ್ಲ. ಕುತೂಹಲದ ಸಂಗತಿಯೆಂದರೆ ದೆಹಲಿ ಕಾಂಗ್ರೆಸ್ ಕಾರ್ಯಕರ್ತ ರಾಜ್ ಬಹಾದೂರ್ ಹೆಸರಿನಲ್ಲಿ ಈ ಸೈಟ್ ದಾಖಲಾಗಿದೆ! id='are-slot-1' class='oiad oi-axt oiadv'> id='top-searched-articles'>2006ರಲ್ಲಿ
ಈ ವೆಬ್‌ಸೈಟ್ ನನ್ನ ಹೆಸರಲ್ಲಿ ನೋಂದಣಿಯಾಗಿದೆ. ಒಂದು ವರ್ಷದ ಹಿಂದೆ ಅಂದರೆ ಜನವರಿ 25, 2011 ರಂದು ಇದನ್ನು ಕೊನೆಯ ಬಾರಿಗೆ ಅಪ್ ಡೇಟ್ ಮಾಡಿದ್ದೇನೆ ಅಷ್ಟೇ ಎಂದು ತಿಲಕ್ ನಗರದ ನಿವಾಸಿ ಬಹಾದೂರ್ ಅಲವತ್ತುಕೊಂಡಿದ್ದಾರೆ. ಆದರೆ ತಮ್ಮ ಈ ವೆಬ್‌ಸೈಟಿನಲ್ಲಿ ಕಾಶ್ಮೀರವು ಪಾಕಿಸ್ತಾನದ ಪಾಲಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಬಹಾದೂರ್ ಹೇಳಿದ್ದಾರೆ.











Click it and Unblock the Notifications