ಕುವೈತ್‌ನಲ್ಲಿ ಅಪಘಾತ : ಧಾರವಾಡದ ದೀಪಾಲಿ ಸಾವು
ಕುವೈತ್,
ಜ. 28 : ಜನವರಿ 27ರ ರಾತ್ರಿ ಕುವೈತ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಮೂಲದ ಉದಯೋನ್ಮುಖ ಗಾಯಕಿ ದೀಪಾಲಿ ಜೋಶಿ ಷಾ ಅವರು ಮೃತರಾಗಿದ್ದಾರೆ. ಶನಿವಾರ ಏರ್ಪಡಿಸಲಾಗಿದ್ದ ಸಂಗೀತ ಸಂಜೆಯಲ್ಲಿ ಅವರು ಹಾಡುವವರಿದ್ದರು. id="toptextpromo">ಭಾರತದ
63ನೇ ಗಣರಾಜ್ಯೋತ್ಸವದ ಪ್ರಯುಕ್ತ ಅಲ್ ಮುಲ್ಲಾ ಎಕ್ಸ್‌ಚೇಂಜ್ ಕಂಪನಿ ಸಂಗೀತ ಸಂಜೆಯನ್ನು ಆಯೋಜಿಸಿತ್ತು. ದೀಪಾಲಿಯವರ ಗೌರವಾರ್ಥ ಭಾರತೀಯ ದೂತಾವಾಸದ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ ಸಂಗೀತ ಸಂಜೆಯನ್ನು ರದ್ದುಗೊಳಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣದಿಂದ ಹೋಟೆಲಿಗೆ ಪ್ರಯಾಣಿಸುತ್ತಿದ್ದಾಗ ಅವರಿದ್ದ ಕಾರು 6ನೇ ಲೇನ್‌ನಲ್ಲಿ ಅಪಘಾತಕ್ಕೀಡಾಗಿದೆ. ದೀಪಾಲಿ ಸ್ಥಳದಲ್ಲೇ ಸಾವಿಗೀಡಾದರೆ, ಜೊತೆಗಿದ್ದವರು ಮತ್ತು ಕಾರಿನ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಫರ್ವಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದೀಪಾಲಿಯವರು ಗಂಡ ಪರೇಶ್ ಷಾ, ತಂಗಿ ಮತ್ತು ಸಹೋದರನನ್ನು ಅಗಲಿದ್ದಾರೆ. [ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ]











Click it and Unblock the Notifications