ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ

ಕುವೈತ್ ಸಂಗೀತ ಸಂಜೆಯ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕುವೈತ್‌ಗೆ ಹೋಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ, ಐ ಆಮ್ ಎಕ್ಸೈಟೆಡ್, ಜ. 29ರಂದು ಮರಳಿ ಬರುತ್ತಿದ್ದೇನೆ ಎಂದು ಶುಕ್ರವಾರ ಜ.27ರಂದು ತಮ್ಮ ಅಪಾರ ಗೆಳೆಯರ ಬಳಗಕ್ಕೆ ಸಂದೇಶ ಬರೆದಿದ್ದರು.
ಆಲ್ ದಿ ಬೆಸ್ಟ್, ಸುಖಕರವಾಗಿ ಮರಳಿ ಬನ್ನಿ, ವಿ ಮಿಸ್ ಯು ಅ ಲಾಟ್, ವಿದೇಶ ಪ್ರವಾಸ ಎಂಜಾಯ್ ಮಾಡಿ ಮುಂತಾಗಿ ಅವರ ಸ್ನೇಹಿತರು, ಹಿತೈಷಿಗಳು ಹಾರೈಸಿದ್ದರು. ಮರಳಿ ಬರುತ್ತೇನೆ ಎಂದು ವಾಗ್ದಾನ ಮಾಡಿದ್ದ ದೀಪಾಲಿ ಮರಳಿಬಾರದ ಜಾಗಕ್ಕೆ ತೆರಳಿದ್ದಾರೆ.
ಫೇಸ್ ಬುಕ್ ನಲ್ಲಿ ಅವರು ಉಲ್ಲೇಖಿಸಿದ್ದ ಇಂಗ್ಲಿಷ್ ಕವನ ತುಂಬಾ ಅರ್ಥಗರ್ಭಿತವಾಗಿದೆ. ಪ್ರತಿಯೊಂದು ವಸ್ತುವಿನ ಮೌಲ್ಯವನ್ನು ಅರಿಯಬೇಕಿದ್ದರೆ ಅದನ್ನು ಕಳೆದುಕೊಂಡವರನ್ನು ಕೇಳಬೇಕು. ಕವನದ ಕೊನೆಯಲ್ಲಿ ಗೆಳೆತನದ ಮೌಲ್ಯ ಅರಿಯಬೇಕಿದ್ದರೆ ಒಬ್ಬರನ್ನು ಕಳೆದುಕೊಳ್ಳಬೇಕು ಎಂದಿದ್ದರು ದೀಪಾಲಿ. ಆ ಕವನ ಓದಿದವರು ಕಣ್ಣಾಲಿಗಳು ತುಂಬಿಬಂದಿವೆ ಎಂದು ಉತ್ತರಿಸಿದ್ದರು.












Click it and Unblock the Notifications