ಹೊರಗುತ್ತಿಗೆಗೆ ಕಡಿವಾಣ, ಶುರುವಾಯ್ತು ಒಬಾಮಾ ಅಭಿಯಾನ

ಅಮೆರಿಕದ ನೇಮಕಾತಿ ಮಸೂದೆ ಬಗ್ಗೆ ಬುಧವಾರ ಮಾತನಾಡಿದ ಒಬಾಮಾ,ಸ್ಥಳೀಯ ಅಭ್ಯರ್ಥಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಭಾರತದ ಹೊರಗುತ್ತಿಗೆ ಸಂಸ್ಥೆ ಇದರ ನೇರ ಪರಿಣಾಮ ಎದುರಿಸಬೇಕಾಗುತ್ತದೆ.
ಹೊರಗುತ್ತಿಗೆ ನಡೆಸುತ್ತಿರುವ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಅನ್ವಯಿಸುವುದಿಲ್ಲ. ಹೊರಗುತ್ತಿಗೆ, ಸಾಲಬಾಧೆ, ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಬೇಕೆಂದು ಅನೇಕ ಹೊಸ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಒಬಾಮಾ ಹೇಳಿದರು.
ಅಮೆರಿಕದ ಈ ಹೊಸ ನೀತಿಯಿಂದ ಚೀನಾ ಕಂಪನಿಗಳಿಗೆ ಪರೋಕ್ಷವಾಗಿ ಲಾಭವಾಗುವ ನಿರೀಕ್ಷೆಯಿದೆ. ಭಾರತದ ಹೊರ ಗುತ್ತಿಗೆ ಸಂಸ್ಥೆಗಳು ತೆರಿಗೆ ಹೊರೆ ಹೊರಬೇಕಾಗುತ್ತದೆ. ಇಲ್ಲದಿದ್ದರೆ ಅಮೆರಿಕದೊಡನೆ ವ್ಯಾಪಾರ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ.












Click it and Unblock the Notifications