ಯಲಹಂಕ ಸಮೀಪದ ಹಜ್ ಘರ್ ಏನು, ಏಕೆ?

ಹಜ್ ಯಾತ್ರೆಗೆ ತೆರಳುವ ಮುಸ್ಲಿಂ ಯಾತ್ರಿಗಳಿಗೆ ಆಧುನಿಕ ಸವಲತ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಮಹತ್ತರ ಕಾರ್ಯ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 60 ಕೋಟಿ ರುಪಾಯಿ ಇದರ ಯೋಜನಾ ವೆಚ್ಚ.
ಹಜ್ ಯಾತ್ರಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಕರ್ಯಗಳನ್ನು ಹಜ್ ಘರ್ ಭವನದಲ್ಲಿ ವಿನ್ಯಾಸಗೊಳಿಸುವ ಯೋಜನೆಯಿದೆ. ಇಲಾಖೆಯ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಸಯ್ಯದ್ ಜಮೀರ್ ಪಾಷ ಮತ್ತು ರಾಜ್ಯ ಹಜ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಗೌಸ್ ಭಾಷ ಅವರು ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಹಜ್ ಘರ್ ವೈಶಿಷ್ಯ್ಟಗಳೇನು?:
ನಿವೇಶನದ ವಿಸ್ತೀರ್ಣ -13865 ಚ.ಮೀ.
ಕಟ್ಟಡದ ವಿಸ್ತೀರ್ಣ -24094 ಚ.ಮೀ, (ಎರಡು ನೆಲ ಮಾಳಿಗೆ, 4 ಮೇಲ್ಮಹಡಿಗಳು)
ವಸತಿ ವ್ಯವಸ್ಥೆ - 100 ಕೊಠಡಿಗಳು, ಪ್ರತಿಯೊಂದರಲ್ಲೂ ಐದು ಹಾಸಿಗೆ ಅವಕಾಶ
ಪ್ರಾರ್ಥನಾ ಸಭಾಗೃಹ -1,500 ಪುರುಷರು, 750 ಮಹಿಳೆಯರು
ಭೋಜನ ಕೊಠಡಿ -700 ಮಂದಿಗೆ
ಸಭಾಂಗಣ -900 ಆಸನಗಳು
ಪಾರ್ಕಿಂಗ್ ಸೌಲಭ್ಯ -300 ಕಾರು












Click it and Unblock the Notifications