ಟಿಸಿಎಸ್ Q3 ತ್ರೈಮಾಸಿಕದಲ್ಲಿ ಲಾಭ ಶೇ.23ರಷ್ಟು ಏರಿಕೆ

TCS
ಮುಂಬೈ, ಜ.18: ಭಾರತದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿ(ಟಿಸಿಎಸ್) ಮೂರನೇ ತ್ರೈಮಾಸಿಕದಲ್ಲಿ ಶೇ 23ರಷ್ಟು ಲಾಭ ಮಾಡಿದೆ.

ಹೊಸ ಹೊರಗುತ್ತಿಗೆ ಒಪ್ಪಂದಗಳು, ರುಪಾಯಿ ಮೌಲ್ಯ ಕುಸಿತ, ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಸಂಸ್ಥೆ ಸೇವೆ ಒದಗಿಸಿದ್ದು, ಒಟ್ಟಾರೆ ವಾರ್ಷಿಕ(y-o-y) ನಿವ್ವಳ ಲಾಭ ಶೇ.18ರಷ್ಟು ಕಂಡಿದೆ.

ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಟಿಸಿಎಸ್ ನ ಒಟ್ಟು ಆದಾಯ 13,203.99 ಕೋಟಿ ರು ಆಗಿದೆ ಎಂದು ಬಿಎಸ್ ಇಗೆ ದಾಖಲೆ ಒದಗಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ ಪ್ರಮಾಣ 9,663.35 ಕೋಟಿ ರು ನಷ್ಟಿತ್ತು. ಆದಾಯ ಗಳಿಕೆಯಲ್ಲಿ ಟಿಸಿಎಸ್ ಒಟ್ಟಾರೆ ಶೇ 36.63ರಷ್ಟು ಪ್ರಗತಿ ಸಾಧಿಸಿದೆ.

ಈ ತ್ರೈಮಾಸಿಕದಲ್ಲಿ ಟಿಸಿಎಸ್ ಸುಮಾರು 10 ಹೊಸ ಒಪ್ಪಂದಗಳಿಗೆ ಸಹಿ ಹಾಕಿದೆ. ಸುಮಾರು 40ಕ್ಕೂ ಅಧಿಕ ಹೊಸ ಗ್ರಾಹಕರನ್ನು ಸೆಳೆದಿದೆ. 18,907 ಉದ್ಯೋಗಿಗಳನ್ನು ಸಂಸ್ಥೆಗೆ ನೇಮಕ ಮಾಡಿಕೊಳ್ಳಲಾಗಿದೆ.

ಡಿ.31, 2011ರ ಕೊನೆಗೆ ಟಿಸಿಎಸ್ ನಲ್ಲಿ ಒಟ್ಟು 2,26,751 ಉದ್ಯೋಗಿಗಳಿದ್ದಾರೆ ಎಂದು ಸಿಎಫ್ ಒ ಎಸ್ ಮಹಾಲಿಂಗಂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+