‘ಮಹಾ ಮೈಸೂರು’ ಸೇರ್ಪಡೆಗೆ 41 ಗ್ರಾಮಗಳು ಅಂಕಿತ

mysore-inching-to-become-greater-mysore
ಮೈಸೂರು, ಜ. 17: ಗ್ರೇಟರ್ ಮೈಸೂರು ನಿರ್ಮಾಣ ಕಾರ್ಯ ಇನ್ನು ಒಂದೂವರೆ ವರ್ಷದೊಳಗಾಗಿ ಪೂರ್ಣಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ. ರಾಮದಾಸ್‌ ತಿಳಿಸಿದ್ದಾರೆ. ಗ್ರೇಟರ್ ಮೈಸೂರು ಭಾಗಕ್ಕೆ ಸೇರ್ಪಡೆಯಾಗಲು 41 ಗ್ರಾಮ ಪಂಚಾಯ್ತಿಗಳು ಒಪ್ಪಿಗೆ ಸೂಚಿಸಿವೆ. ಈ ನಿಟ್ಟಿನಲ್ಲಿ ಗ್ರೇಟರ್ ಮೈಸೂರು ರಚನೆಯ ಭಾಗವಾಗಿ ಈ ಗ್ರಾಮಗಳಿಗೂ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸರ್ಕಾರಕ್ಕೆ ವರದಿ ಸಲಿಸಲಾಗುವುದು ಎಂದರು.

ಅಂದರೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಂತೆ (BBMP) ಮೈಸೂರು ಪಾಲಿಕೆಯೂ ಮೈಸೂರು ಬೃಹತ್ ಮಹಾನಗರ ಪಾಲಿಕೆ (MBMP) ಆಗಲಿದೆ. ಇದರಿಂದ ಬೃಹತ್ ಮೈಸೂರು ಭಾಗದ ಜನಸಂಖ್ಯೆ 10.8 ಲಕ್ಷಕ್ಕೆ ತಲುಪಲಿದೆ.

41 ಗ್ರಾಮಗಳು ಸೇರಿದ ನಂತರ 65 ವಾರ್ಡ್‌ಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು. 128.42 ಚದರ ಕಿ.ಮೀ ವಿಸ್ತೀರ್ಣ ಇರುವ ಮೈಸೂರು, ಗ್ರೇಟರ್ ಮೈಸೂರು ಆದ ಬಳಿಕ 298 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಲಿದೆ ಎಂದು ತಿಳಿಸಿದರು.

ಈಗಾಗಲೇ ಮೈಸೂರಿನ ಆದಾಯ 30 ಕೋಟಿ ರೂ.ಗಳಿದ್ದು ಗ್ರೇಟರ್ ಮೈಸೂರು ರಚನೆಯ ನಂತರ ಅದು 60 ಕೋಟಿಗೆ ಏರಿಕೆಯಾಗಲಿದೆ. ಹಾಗೂ 30 ಕೋಟಿ ಇರುವ ಅನುದಾನದ ಪ್ರಮಾಣ 70 ಕೋಟಿಗೆ ಏರಿಕೆಯಾಗಲಿದೆ. ಆದಾಯ ಹಾಗೂ ಅನುದಾನವನ್ನು ಹೋಲಿಕೆ ಮಾಡಿ ನೋಡಿದಾಗ ಬೃಹತ್‌ ಪಾಲಿಕೆಯಾದ ನಂತರ ತಗುಲಬಹುದಾದ ವೆಚ್ಚದ ಬಗ್ಗೆ ಸರ್ಕಾರಕ್ಕೆ ಅನುದಾನವನ್ನು ಕೋರಲು ಅವಕಾಶ ಮಾಡಿಕೊಡುತ್ತದೆ.

ಈಗಾಗಲೇ ಗ್ರಾಪಂ ವ್ಯಾಪ್ತಿಗೆ ಬರುವ 41 ಹಳ್ಳಿಗಳಲ್ಲಿ ಚಾಮುಂಡಿ ಬೆಟ್ಟ, ಹಿನಕಲ್‌, ಮೇಟಗಳ್ಳಿ, ಹೂಟಗಳ್ಳಿ, ರಮ್ಮನಹಳ್ಳಿ, ಶ್ರೀರಾಂಪುರ, ಆಲನಹಳ್ಳಿ, ದಟ್ಟಗಳ್ಳಿ, ಹೆಬ್ಟಾಳು, ಕೆಸರೆ, ಕುರುಬಾರಹಳ್ಳಿ ಗಳಿಗೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಬೃಹತ್‌ ಮೈಸೂರು ವ್ಯಾಪ್ತಿಗೆ ಬರುವ ಕೈಗಾರಿಕಾ ಪ್ರದೇಶಗಳಿಗೆ ಅವುಗಳದ್ದೆ ಆದ ಕೈಗಾರಿಕಾ ಪ್ರಾಧಿಕಾರ ರಚಿಸುವುದು ಸೂಕ್ತವಲ್ಲ. ಪ್ರತ್ಯೇಕ ಪ್ರಾಧಿಕಾರ ರಚಿಸಿದರೆ ಗ್ರೇಟರ್ ಮೈಸೂರ್ ಘೋಷಣೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸುತ್ತಮುತ್ತಲ ಗ್ರಾಮೀಣ ಭಾಗದ ಕೈಗಾರಿಕಾ ಪ್ರದೇಶಗಳನ್ನೂ ಗ್ರೇಟರ್ ಮೈಸೂರ್ ವ್ಯಾಪ್ತಿಯೊಳಗೆ ಸೇರ್ಪಡೆ ಮಾಡಿಕೊಂಡು, ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಕೈಗಾರಿಕಾ ಪ್ರದೇಶಗಳನ್ನು ಗ್ರಾಮ ಪಂಚಾಯತ್ ನಿಂದ ಬೇರ್ಪಡಿಸಿ, ಪ್ರತ್ಯೇಕ ಪ್ರಾಧಿಕಾರ ರಚನೆ ಮೂಲಕ ಎಲ್ಲ ರೀತಿಯ ಅಭಿವೃದ್ಧಿಗೆ ಸ್ವಾಯತ್ತತೆ ಕಲ್ಪಿಸಬೇಕೆಂಬ ಉದ್ದಿಮೆದಾರರ ಬೇಡಿಕೆಗೆ ಸಂಬಂಧಪಟ್ಟಂತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+