ಜ.18ರಂದು ವಿಕಿಪೀಡಿಯ ಸೇವೆ ಲಭ್ಯವಿಲ್ಲ

ಯುಎಸ್ ಸೆನೆಟ್ ನಲ್ಲಿ ಪೈರಸಿ ವಿರೋಧಿ ಮಸೂದೆ ಚರ್ಚೆ ಹಂತದಲ್ಲಿದೆ. Protect IP Act ಹಾಗೂ Stop Online Piracy Act (SOPA) ವಿರೋಧಿಸಿ 24 ತಾಸುಗಳ ಪ್ರತಿಭಟನೆಯನ್ನು ವಿಕಿಪೀಡಿಯ ಯೋಜಿಸಿದೆ.
SOPA ಕಾಯ್ದೆ ಜಾರಿಯಾದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇರುವುದಿಲ್ಲ, ಇದು ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಗೂಗಲ್ ಹಾಗೂ ಫೇಸ್ ಬುಕ್ ಸಂಸ್ಥೆಗಳು ಪ್ರತಿಕ್ರಿಯಿಸಿದೆ.
ಕಾಮ್ ಸ್ಕೋರ್ ಮಾಹಿತಿ ಪ್ರಕಾರ ವಿಕಿಪೀಡಿಯದ ಇಂಗ್ಲೀಷ್ ಆವೃತ್ತಿ ಪುಟಕ್ಕೆ ಪ್ರತಿ ದಿನ 25 ಮಿಲಿಯನ್ ವೀಕ್ಷಕರು ಭೇಟಿ ಕೊಡುತ್ತಾರೆ.
"SOPA is crippled now. PIPA is still extremely dangerous," ಎಂದು ವೇಲ್ಸ್ ಟ್ವೀಟ್ ಮಾಡಿದ್ದಾರೆ. ವಿಕಿಮೀಡಿಯಾದಲ್ಲಿ ಪ್ರತಿಭಟನೆ ವಿವರಗಳು ಲಭ್ಯವಿದೆ.
Reddit, BoingBoing, Cheezburger network, Craiglist, Mozilla, Minecraft ಮುಂತಾದ ವಿಡಿಯೋ ಗೇಮ್ಸ್ ಆಧಾರಿತ ವೆಬ್ ತಾಣಗಳು ವಿಕಿಪೀಡಿಯ ಹಾದಿಯಲ್ಲೇ ಒಂದು ದಿನದ ಮಟ್ಟಿಗೆ ಸೇವೆ ಸ್ಥಗಿತಗೊಳಿಸಲಿದೆ.












Click it and Unblock the Notifications