ಎಚ್ ಸಿಎಲ್ ನಿವ್ವಳ ಲಾಭ ಶೇ 43ರಷ್ಟು ಜಿಗಿತ

ಹೊರಗುತ್ತಿಗೆ ಸೇವೆಯನ್ನು ನೆಚ್ಚಿಕೊಂಡಿರುವ ಎಚ್ ಸಿಎಲ್ ನಿವ್ವಳ ಆದಾಯ 573 ಕೋಟಿ ರು ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭಲ್ಲಿ ಶೇ.43.3 ರಷ್ಟು ಹೆಚ್ಚಳ ಕಂಡು ಬಂದಿದೆ.
ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಡಿಸೆಂಬರ್ 2011ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ 13 ರಷ್ಟು ಪ್ರಗತಿ ಕಂಡಿದೆ. 5,254 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,651.3 ಕೋಟಿ ರು ಗಳಿಸಿತ್ತು.
2ನೇ ತ್ರೈಮಾಸಿಕದ ಅವಧಿಯಲ್ಲಿ ಒಟ್ಟು 2,556 ಹೊಸ ನೇಮಕಾತಿ ನಡೆದಿದೆ. ಡಿ.31 ರ ಕೊನೆಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆ 83,076 ನಷ್ಟಿದೆ ಎಂದು ಎಚ್ ಸಿಎಲ್ ನ ಸಿಎಫ್ ಒ ಅನಿಲ್ ಹೇಳಿದ್ದಾರೆ.












Click it and Unblock the Notifications