ಜರವಾ ಜನಾಂಗ ವಿಡಿಯೋ: ಪ್ರವಾಸಿ ಬಂಧನ

Jarawa Tribes video, one held
ಪೋರ್ಟ್ ಬ್ಲೇರ್, ಜ.16: ಜರವಾ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಆಮಿಷವೊಡ್ಡಿ ನಗ್ನನೃತ್ಯಕ್ಕೆ ಪ್ರಚೋದಿಸಿದ ಬೆನ್ನಲ್ಲೇ ಜರವಾ ಪುರುಷರ ನಗ್ನ ನೃತ್ಯ ವಿಡಿಯೋ ಸಂಚಲನ ಸೃಷ್ಟಿಸಿದೆ. ಆದರೆ, ಈ ವಿವಾದಿತ ವಿಡಿಯೋ ಚಿತ್ರೀಕರಿಸಿದ ಪ್ರವಾಸಿಯನ್ನು ಬಂಧಿಸಲಾಗಿದೆ.

ಅಂಡಮಾನ್ ಟ್ರಂಕ್ ರಸ್ತೆಯಲ್ಲಿ ಇಬ್ಬರು ಜರವಾ ಪುರುಷರು ನಗ್ನವಾಗಿ ನರ್ತಸಿದ ವಿಡಿಯೋ ಚಿತ್ರೀಕರಿಸಿದ ತಪ್ಪಿಗಾಗಿ ಪಶ್ಚಿಮ ಬಂಗಾಲದ ಪ್ರವಾಸಿಯೊಬ್ಬನನ್ನು ಬಂಧಿಸಲಾಗಿದೆ.

ಜಿರ್ಕಾಟಾಂಗ್ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಯನ್ನು ತಡೆದ ಪೊಲೀಸರು, ಆತನ ಕಾರು ಹಾಗೂ ಕೆಮೆರಾವನ್ನು ವಶಪಡಿಸಿಕೊಂಡಿದ್ದಾರೆ. ವಿಡಿಯೋ ದೃಶ್ಯದಲ್ಲಿ ಇಬ್ಬರು ಜರವಾ ಪುರುಷರಲ್ಲದೆ ಅನೇಕ ಮಂದಿ ಟ್ರಂಕ್ ರಸ್ತೆಯಲ್ಲಿ ಹಾದುಹೋಗುವ ದೃಶ್ಯವಿದೆ.

ಆದರೆ, ಪೊಲೀಸರು ಆರೋಪಿತ ಛಾಯಾಗ್ರಹಕ/ಪ್ರವಾಸಿ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಎಚ್ಚರಿಕೆ ನೀಡಿ ಆತನನ್ನು ಕಳಿಸಲಾಗಿದೆ. ಸದಾ ಅರೆ ನಗ್ನಾವಸ್ಥೆಯಲ್ಲಿರುವ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಜರವಾ ಬುಡಕಟ್ಟು ಜನಾಂಗದ ಮಹಿಳೆರ ನಗ್ನ ನೃತ್ಯ ದೃಶ್ಯ ಸಾಕಷ್ಟು ವಿವಾದವುಂಟು ಮಾಡಿತ್ತು.

ಆದರೆ, ಗೃಹ ಸಚಿವಾಲಯ ಇದು ಹಳೆ ವಿಡಿಯೋ ಯಾರೋ ಕಿಡಿಗೇಡಿಗಳು ಮತ್ತೆ ಇಂಟರ್ ನೆಟ್ ನಲ್ಲಿ ಹರಿಯಬಿಟ್ಟಿದ್ದಾರೆ ಎಂದು ವಾದಿಸಿತ್ತು. ಆದರೆ, ಗೃಹ ಸಚಿವ ಪಿ ಚಿದಂಬರಂ ಅವರು, ವಿಡಿಯೋ ತೆಗೆದವರನ್ನು ಬಂಧಿಸುವಂತೆ ಆದೇಶಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+