ಅಸಲಿಗೆ ಹಾಲಿನಲ್ಲಿ ಸೋಪು ಯಾಕಪ್ಪಾ ಅಂದರೆ...

ಸಾಮಾನ್ಯವಾಗಿ ಹಾಲಿನಲ್ಲಿ ಕಂಡುಬರುವ ಕಲಬೆರಕೆ ಪದಾರ್ಥಗಳೆಂದರೆ ವಿಷಕಾರಿ ರಾಸಾಯನಿಕಗಳು, ಯೂರಿಯಾ, ಹೈಡ್ರೋಜನ್ ಪೆರಾಕ್ಸೈಡ್, ಸಕ್ಕರೆ, ಸ್ಟಾರ್ಚ್, ಗ್ಲೊಕೋಸ್, ಫಾರ್ಮಾಲಿನ್ ಮತ್ತು ವನಸ್ಪತಿ ಕೊಬ್ಬು.
ಕೆಲವು ಋತುಮಾನದಲ್ಲಿ ಹಾಲಿನ ಸರಬರಾಜು ಪ್ರಮಾಣ ಕಡಿಮೆಯಾಗಿರುತ್ತದೆ. ಆಗ ಬೇಡಿಕೆಯನ್ನು ಸರಿದೂಗಿಸಲು ಅಂದರೆ ಹಾಲಿನ ಪ್ರಮಾಣನ್ನು ಕಾಯ್ದುಕೊಳ್ಳಲು ಈ ಬೆರಕೆ ವಸ್ತುಗಳನ್ನು ಹಾಲಿಗೆ ಸೇರಿಸುತ್ತಾರೆ. ಆದರೆ ಇವು ಆರೋಗ್ಯಕ್ಕೆ ಖಂಡಿತ ಮಾರಕ. ಇನ್ನು ಹಾಲಿನಲ್ಲಿ ಸೋಪು ಯಾಕಪ್ಪಾ ಕಂಡುಬರುತ್ತದೆ ಅಂದರೆ ಹಾಲಿನ ದೊಡ್ಡ ದೊಡ್ಡ ಪಾತ್ರೆಗಳನ್ನು ತೊಳೆಯುವಾಗ ಈ ಸೋಪಿನ ಅಂಶ ಹಾಗೇ ಉಳಿದುಬಿಟ್ಟು, ಹಾಲಿನಲ್ಲಿ ಬೆರಕೆಯಾಗುತ್ತಿದೆ.
ಮರೆತ ಮಾತು: ಪುರಾತನ ಕಾಲದಿಂದಲೂ ಪರಿಪಾಲಿಸಿಕೊಂಡು ಬಂದಿರುವ ಪದ್ಧತಿಯಂತೆ ಹಾಲಿನ ಪ್ರಮಾಣ ಹೆಚ್ಚಿಸಲು ನೀರು ಬೆರೆಸುವುದು ಇದ್ದೇ ಇದೆ! ಅದೂ ಶುದ್ಧ ನೀರು ಅಂದ್ಕೊಂಡರೆ ನೀವು ಮುಗ್ಧರೇ ಸರಿ.











Click it and Unblock the Notifications