ವಿಷಕಾರಿ ಮಶ್ರೂಮ್ ಸೇವಿಸಿದ ಅಡುಗೆಭಟ್ಟರ ಸಾವು

ಅಡುಗೆ ತಯಾರಿಸುವ ಹಂತದಲ್ಲಿ ಅಕಸ್ಮಾತಾಗಿ ರುಚಿನೋಡಲು ಈ ವಿಷಪೂರಿತ ಮಶ್ರೂಮ್‌ಗಳನ್ನು ಪ್ರಮುಖ ಅಡುಗೆಭಟ್ಟ ಲ್ಯೂ ಜುನ್ (38) ಮತ್ತು ಆತನ ಸಹಾಯಕಿ ಸೌ ಸಿಯಾಂಗ್ (55) ಸೇವಿಸಿದ್ದಾರೆ. ಕೂಡಲೆ ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿಯಾದರೂ ಯಕೃತ್ತು ಕೈಕೊಟ್ಟಿದ್ದರಿಂದ ಮಂಗಳವಾರ ಇಬ್ಬರೂ ಕೊನೆಯುಸಿರೆಳೆದರು ಎಂದು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಈ ಡೆಡ್ಲಿ ಮಶ್ರೂಮ್ ಫ್ರೈಯನ್ನು ಹಾರ್ಮೊನಿ ಜರ್ಮನ್ ಕ್ಲಬ್‌ನಲ್ಲಿ ಸೇರಿದ್ದ ನೂರಾರು ಜನರು ಸೇವಿಸಿದ್ದರೆ ದೊಡ್ಡ ಅನಾಹುತವೇ ನಡೆದುಹೋಗುತ್ತಿತ್ತು. ಆದರೆ, ಆ ಫ್ರೈಯನ್ನು ಹೊಸ ವರ್ಷದ ಪಾರ್ಟಿಗಾಗಿ ತಯಾರಿಸಿರಲಿಲ್ಲ ಎಂದು ಕ್ಲಬ್ ಮ್ಯಾನೇಜರ್ ಜಾರಿಕೊಳ್ಳಲು ಯತ್ನಿಸುತ್ತಿದ್ದಾರೆ.
ನೂರಾರು ಜನರಿಗಾಗಿ ಭೋಜನ ತಯಾರಿಸಿದಾಗ ಅಡುಗೆಭಟ್ಟರೇ ಮೊದಲು ರುಚಿನೋಡಿ, ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ದೃಢಪಡಿಸಿಕೊಂಡು ಆಹ್ವಾನಿತರಿಗೆ ಬಡಿಸುವುದು ವಾಡಿಕೆ. ಇಲ್ಲಿಯೂ ಕೂಡ ಲ್ಯೂ ಮತ್ತು ಸಿಯಾಂಗ್ ಅದನ್ನೇ ಮಾಡಿದ್ದಾರೆ. ರುಚಿ ನೋಡಿದ್ದ ಇನ್ನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.












Click it and Unblock the Notifications