ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಜ.8 ರಿಂದ ನಂದಿನಿ ಹಾಲು ದರ 3 ರೂ ಏರಿಕೆ

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    nandini-milk-prices-hike-likely-by-3-rupees
    ಬೆಂಗಳೂರು, ಜ.6: ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರಿಗೆ 3 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ KMF ಅಧ್ಯಕ್ಷ ಸೋಮಶೇಖರ ರೆಡ್ಡಿ ಹಾಲಿನ ಬೆಲೆಯನ್ನು ರಾಜ್ಯಾದ್ಯಂತ ಜನವರಿ 8ರಿಂದ ಜಾರಿಗೆ ಬರುವಂತೆ ಏರಿಸಿದ್ದಾರೆ.ಈ ಹಿಂದೆ, ಫೆಬ್ರವರಿ 15ರಂದು KMF ಹಾಲಿನ ದರವನ್ನು 2 ರುಪಾಯಿ ಏರಿಸಲಾಗಿತ್ತು.

    ನೀಲಿ ಹಾಗೂ ಹಸಿರು ಪ್ಯಾಕೆಟ್‌ನಲ್ಲಿ ಮಾರಾಟವಾಗುವ ನಂದಿನಿ ಹಾಲಿನ ಬೆಲೆ 3 ರೂ. ಹೆಚ್ಚಳವಾಗಿದೆ. ಈ ಮೂಲಕ ನೀಲಿ ಪ್ಯಾಕೆಟ್‌ ಹಾಲಿನ ಬೆಲೆ 24 ರೂ.ಗೆ ಹಾಗೂ ಹಸಿರು ಪ್ಯಾಕೆಟ್‌ ಹಾಲಿನ ಬೆಲೆ 27 ರೂ. ಗೆ ಏರಿಕೆಯಾಗಿದೆ. KMF ಪ್ರತಿ ಲೀಟರಿಗೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

    ಕಿತ್ತಳೆ ಬಣ್ಣದ ಪ್ಯಾಕೆಟ್‌ನಲ್ಲಿ ಮಾರಾಟವಾಗುವ ಹಾಲಿನ ದರ 2 ರೂ. ನಷ್ಟು ಏರಿಕೆಯಾಗಿ, 30 ರೂ.ಗೆ ಹಾಗೂ ಹಳದಿ ಬಣ್ಣದ ಪ್ಯಾಕೆಟ್‌ನಲ್ಲಿ ಬಿಕರಿಯಾಗುವ ಹಾಲಿನ ದರ 2 ರೂ. ಏರಿಕೆಯಾಗಿ, ಲೀಟರಿಗೆ 20 ರೂ.ಗೆ ಹೆಚ್ಚಳಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
    ಏರಿಕೆ:
    ಪ್ಯಾಕೆಟ್‌ ಹಾಲಿ ದರ ಪರಿಷ್ಕೃತ ಏರಿಕೆ (ರೂ.ಗಳಲ್ಲಿ )
    ಹಳದಿ 18 20
    ನೀಲಿ 21 24
    ಹಸಿರು 24 27
    ಕಿತ್ತಳೆ 28 30

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The decision has been taken at a KMF board meeting on December 17 and the federation is likely to place its request to the government on Tuesday. As such CM will decide upon the milk Prices Hike today.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more