ಹಳದಿ ಜ್ವರ: ಭಾವಿ ಶಾಸಕನ ಮೈಮೇಲೆ 2 ಕೋಟಿ ರು ಚಿನ್ನ!

ಮಹಾರಾಷ್ಟ್ರದ ಎನ್ ಸಿಪಿ ಯುವ ನಾಯಕ ಸಾಮ್ರಾಟ್ ಮೋಜ್ (ಹೆಸರೂ ಚೆನ್ನಾಗಿದೆ ಅಲ್ವಾ!) ಟೂರಿಸ್ಟ್ ಬಸ್ ವಹಿವಾಟು ನಡೆಸುತ್ತಿದ್ದು, ಮೈಮೇಲೆ 2.37 ಕೋಟಿ ರುಪಾಯಿ ತೂಕದ ಚಿನ್ನಾಭರಣ ಧರಿಸಿದ್ದಾನೆ. ಇಂತಿಪ್ಪ ಸಾಮ್ರಾಟ್ ಮೋಜ್ ಸಹಜವಾಗಿಯೇ ಮುಂದಿನ ಚುನಾವಣೆಯಲ್ಲಿ ಶಾಸಕನಾಗಿ ಆರಿಸಿಬರಲು ತವಕಿಸುತ್ತಿದ್ದಾನೆ.
ಯಾಕೋ ಈ ಸಂದರ್ಭದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಶಾಸಕ, ದಿವಂಗತ ರಮೇಶ್ ವಾಂಜಲೆ ನೆನಪಿಗೆ ಬರುತ್ತಿದ್ದಾನೆ. ಈತನೂ ಅಷ್ಟೇ ಕೊರಳು, ಮುಂಗೈ, ವಗೈರೆ ಜಾಗಗಳಲ್ಲಿ ಹಳೆಯ ಬಾವಿ ನೀರು ಸೇದುವ ಹಗ್ಗದ ಮಾದರಿಯಲ್ಲಿ ಚಿನ್ನದ ಸರಗಳನ್ನು ಧರಿಸುತ್ತಿದ್ದ. ಅದೇ ಹಾದಿ ಹಿಡಿದಿದ್ದಾನೆ. ಈ ಯುವ ಸಾಮ್ರಾಟ್. ಮತದಾರ ಪ್ರಭುಗಳು ಈತನಿಗೇ ವೋಟು ಗುದ್ದಬೇಕಷ್ಟೆ.
ಈ ಪುಣ್ಮಾತ್ಮ 'ನನಗೆ ಚಿಕ್ಕಂದಿನಿಂದಲೂ ಈ ಹಳದಿ ಲೋಹ ಜ್ವರ ಇದೆ' ಎಂದು ಯಾವುದೇ ಎಗ್ಗಿಲ್ಲದೆ ಹೇಳಿಕೊಳ್ಳುತ್ತಾನೆ. ಇದೀಗ 30 ವರ್ಷ ಪ್ರಾಯದ, ಸಾಧಾರಣ ಮೈಕಟ್ಟಿನ ಸಾಮ್ರಾಟ್ ಮೈಮೇಲೆ ರಾರಾಜಿಸುತ್ತಿರುವ ಈ ಚಿನ್ನಾಭರಣ 8.5 ಕೆಜಿ ತೂಗುತ್ತದೆ. ಅಂದಹಾಗೆ ಈ ಚಿನ್ನದಂತಹ ಅಭ್ಯರ್ಥಿಯನ್ನು ಮತದಾರ ಪ್ರಭು ಗುರುತಿಸುತ್ತಿರುವುದು ಆತನ ಮೈಮೇಲಿನ ಚಿನ್ನವನ್ನು ನೋಡಿಯೇ.












Click it and Unblock the Notifications