ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲವ ಬಿಟ್ಟು ನೀರ ಮೇಲೆ ಸಾಗುವ ದುಬಾರಿ ದೋಣಿಗಳು

|
Google Oneindia Kannada News

Most Expensive Yachts In The World
ಫ್ಯಾನ್ಸಿ ಮತ್ತು ದುಬಾರಿಯಾಗಿರುವ ಕಾರುಗಳ ರೀತಿ ದುಬಾರಿಯಾದ ಹಾಯಿದೋಣಿ ಅಥವಾ ವಿಹಾರದ ದೋಣಿಗಳನ್ನು ಖರೀದಿಸುವುದು ಶ್ರೀಮಂತರ ಫ್ಯಾಷನ್ ಮತ್ತು ಪ್ರತಿಷ್ಠೆಯಾಗಿದೆ. ಟಿವಿಯಲ್ಲಿ ಅಥವಾ ಕೆಲವೊಂದು ಸಿನಿಮಾಗಳಲ್ಲಿ ದೋಣಿ ವಿಹಾರವನ್ನು ತೋರಿಸುವಾಗ ಈ ರೀತಿಯ ದೋಣಿಗಳನ್ನು ನೋಡುತ್ತೇವೆ.

ಅವುಗಳ ಅಂದ ಚೆಂದವನ್ನು ನೋಡುವಾಗ ಅದರಲ್ಲಿ ಒಮ್ಮೆ ವಿಹರಿಸುವ ಭಾಗ್ಯ ದೊರೆತರೆ ಚೆನ್ನ ಎಂದು ಬಯಸುವುದು ಸಹಜ. ಹಾಗೆಯೆ ಪ್ರಪಂಚದಲ್ಲಿಯೆ ಆಕರ್ಷಕ ಮತ್ತು ದುಬಾರಿಯಾಗಿರುವ ದೋಣಿಗಳು ಯಾವುವು ಎಂದು ಒಂದು ಕ್ಷಣ ಯೋಚಿಸುತ್ತೇವೆ.

ಪ್ರಪಂಚದಲ್ಲಿಯೆ ಆಕರ್ಷಕ ಮತ್ತು ದುಬಾರಿಯಾಗಿರುವ ದೋಣಿಗಳನ್ನು ಪರಿಚಯಸುತ್ತಿದ್ದೇವೆ ಮುಂದೆ ಓದಿ.

1. ಹಿಸ್ಟೋರಿ ಸುಪ್ರೀಮ್: ಇದು ಪ್ರಪಂಚದಲ್ಲಿಯೆ ದುಬಾರಿಯಾಗಿರುವ ವಿಹಾರ ದೋಣಿಯಾಗಿದ್ದು ಇದಕ್ಕೆ ಚಿನ್ನದ ಲೇಪನವನ್ನು ನೀಡಿದೆ. ಈ ದೋಣಿ 3 ಬಿಲಿಯನ್ ಡಾಲರ್ ಬೆಲೆ ಬಾಳುವಂತಹ ದೋಣಿಯಾಗಿದೆ. 100 ಅಡಿ ಎತ್ತರವಿರುವ ಈ ದೋಣಿಯನ್ನು 100 ಟನ್ ಚಿನ್ನ ಬಳಸಿ ತಯಾರಿಸಲಾಗಿದೆ. ಇದರಲ್ಲಿ ಮಲಗುವ ಜಾಗವನ್ನು ಪ್ಲಾಟಿನಂ ಬಳಸಿ ತಯಾರಿಸಲಾಗಿದೆ. ಈ ದೋಣಿ ಮಲೇಷ್ಯಾದ ಉದ್ಯಮಿಗೆ ಸೇರಿದ್ದಾಗಿದ್ದು ಇದನ್ನು ಇಟಲಿಯಲ್ಲಿ ತಯಾರಿಸಿ ಮಲೇಷ್ಯಾದಲ್ಲಿ ಇದರ ಕೆಲಸವನ್ನು ಸಂಪೂರ್ಣ ಮಾಡಲಾಯಿತು.

2. ಎಕ್ಲಿಪ್ಸ್: ಇದು ಪ್ರಪಂಚದ ಎರಡನೇ ದುಬಾರಿ ದೋಣಿಯಾಗಿದೆ. ರಷ್ಯಾದ ಬಿಲಿಯನರ್, ಚೆಲ್ ಸಿ ಫೂಟ್ ಬಾಲ್ ಕ್ಲಬ್ ಮುಖ್ಯಸ್ಥರಾದ ರೋಮನ್ ಅಬ್ರಾಮೋವಿಚ್ ಇದರ ಮಾಲೀಕರು. 1.2 ಬಿಲಿಯನ್ ಡಾಲರ್ ಬೆಲೆ ಬಾಳುವ ಈ ದೋಣಿ 126 ಮೀಟರ್ ಉದ್ದವಿದೆ. ಇದರಲ್ಲಿ 60 ಜನರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು 2 ಸಬ್ ಮೆರಿನೆ ಹೊಂದಿದೆ. ಅದರಲ್ಲಿ ಒಂದನ್ನು ಸಮುದ್ರ ಬಗ್ಗೆ ಅಧ್ಯಾಯನ ಮಾಡಲು ಮತ್ತೊಂದನ್ನು ಸಮುದ್ರದಲ್ಲಿ 2 ವಾರಗಳ ವಿಶ್ರಾಂತಿಯನ್ನು ಪಡೆಯುವ ಉದ್ದೇಶಕ್ಕೆ ಬಳಸಲಾಗುತ್ತದೆ.

3. ಸ್ಟ್ರೀಟ್ ಆಫ್ ಮೋನಾಕೊ:ಈ ದೋಣಿ ಇನ್ನೂ ನಿರ್ಮಾಣದ ಹಂತದಲ್ಲಿದೆ. ಈ ದೋಣಿ ಪ್ರಪಂಚದಲ್ಲಿಯೆ ಅತೀ ಉದ್ದವಾದ ಮತ್ತು ಹೆಚ್ಚು ಸುರಕ್ಷತೆಯನ್ನು ಹೊಂದಿರುವಂತಹ ದೋಣಿಯಾಗಿದೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದರ ನಿರ್ಮಾಣಕ್ಕೆ 1.1 ಬಿಲಿಯನ್ ಡಾಲರ್ ವೆಚ್ಚ ತಗಲಲಿದೆ. ಇದರಲ್ಲಿ ಹೋಟೆಲ್ ಡಿ ಪ್ಯಾಲೇಸ್, ಲಾ ರಿ ಕೇಸಸೆ , ಲೂಯಿಸ್ ಹೋಟೆಲ್, ಮೋನೆಟೆ ಕಾರ್ಲೊ ಕ್ಯಾಸಿನೊ, ರೇಸ್ ಟ್ರ್ಯಾಕ್, ಈಜುಕೊಳ, ಟೆನ್ನೀಸ್ ಕೋರ್ಟ್ ಮತ್ತು ಸಿನಿಮಾ ಥಿಯೇಟರ್ ಹೊಂದಿದೆ. ಇದನ್ನು ತೇಲುತ್ತಿರುವ ನಗರ ಎಂದು ಕೂಡ ಕರೆಯುತ್ತಾರೆ.

4. ದುಬೈ: ದುಬೈ ದೋಣಿಯನ್ನು ಪ್ಲಾಟಿನಂ 525, ಗೋಲ್ಡನ್ ಸ್ಟಾರ್ ಎಂದು ಕೂಡ ಕರೆಯಲಾಗುತ್ತಿದೆ. ಇದು 300 ಮಿಲಿಯನ್ ಡಾಲರ್ ಬೆಲೆ ಬಾಳುವಂತಹ ದೋಣಿಯಾಗಿದೆ.ಈ ದೋಣಿ ನಿರ್ಮಾಣವನ್ನು 1996ರಲ್ಲಿ ಪ್ರಾರಂಭಸಲಾಗಿತ್ತು. ನಂತರ ಸ್ವಲ್ಪ ಹಣಕಾಸಿನ ತೊಂದರೆಯಿಂದಾಗಿ ಇದರ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಶೇಹಿದ್ ಮೊಹ್ಮದ್ ಬಿನ್ ರಶೀದ್ ಆಲ್ ಮಾಕ್ಟಮ್ ಇದನ್ನು 2011ರಲ್ಲಿ ಇದರ ನಿರ್ಮಾಣವನ್ನು ಪುನಃ ಪ್ರಾರಂಭಿಸಿದರು. ದುಬೈ ದುಬಾರಿಯಾದ ದೋಣಿ ಅಷ್ಟೇ ಅಲ್ಲ ಪ್ರಪಂಚದಲ್ಲಿಯೆ ಉದ್ದವಾದ 2ನೇ ದೋಣಿಯಾಗಿದೆ.

5. ರೈಸಿಂಗ್ ಸನ್: 200 ಮಿಲಿಯನ್ ಡಾಲರ್ ಬೆಲೆ ಬಾಳುವ ಈ ವಿಹಾರ ದೋಣಿಯಲ್ಲಿ 5 ಅಂತಸ್ತುಗಳಿದ್ದು 82 ರೂಂಗಳು, ಜಿಮ್, ಪ್ಲಾಸಂ ಸ್ಕ್ರೀನ್ ಮತ್ತು ವೈನ್ ಮಾರಾಟ ಕೂಡ ಮಾಡಲಾಗುವುದು.

English summary
Like fancy cars, diamond studded car wheels and big mansions or homes, even private yachts are synonymous with the rich and famous. You must be curious to know which are the most expensive yachts in the world! Here are 5 most expensive yachts in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X