16ರ ಬಾಲೆ ಎಂಎಂಎಸ್ ಹಂಚಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

Nagpur MMS scandal
ನಾಗಪುರ, ಜ.5: 16ರ ಹರೆಯದ ಬಾಲೆಯನ್ನು ಲೈಂಗಿಕವಾಗಿ ಹಿಂಸಿಸಿ ಎಂಎಂಎಸ್ ಕ್ಲಿಪ್ ತಯಾರಿಸಿ ಹಂಚುತ್ತಿದ್ದ ಇಬ್ಬರು ಇಂಜಿನಿಯರ್ ವಿದ್ಯಾರ್ಥಿಗಳನ್ನು ನಾಗಪುರದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

19 ವರ್ಷದ ಮಿತಿಲೇಶ್ ಜೊತೆ ಹುಡುಗಿಗೆ ಸಂಬಂಧವಿತ್ತು ಎನ್ನಲಾಗಿದೆ. ಮಿತಿಲೇಶ್ ಪ್ರಭಾವಿ ಕಾಂಗ್ರೆಸ್ ಲೀಡರ್ ಯಶೋಧಾ ಧನರಾಜ್ ಗಜ್ಭಿಯೇ ಅವರ ಮಗನಾಗಿದ್ದಾನೆ.

ಶಾಲೆಗೆ ಹೋಗುವುದನ್ನು ನಿಲ್ಲಿಸಿ ಮಿತಿಲೇಶ್ ಜೊತೆ ಪ್ರೇಮಪಾಠ ಕಲಿಯುತ್ತಿದ್ದ ಹುಡುಗಿಗೆ ಮದುವೆಯ ಆಸೆಯುಂಟಾಗಿತ್ತು. ಈ ಬಗ್ಗೆ ಮಿತಿಲೇಶ್ ನನ್ನು ಕೇಳಿದಾಗ ಆತ ನಿರಾಕರಿಸಿ, ಇಬ್ಬರ ನಡುವೆ ನಡೆದ ಸರಸ ಪ್ರಸಂಗದ ಕ್ಲಿಪ್ಪಿಂಗ್ ತೋರಿಸಿ ಹೆದರಿಸತೊಡಗಿದ.

ಮಿತಿಲೇಶ್ ನಂತರ ತನ್ನ ಸ್ನೇಹಿತನ ಜೊತೆ ಆಕೆಯನ್ನು ಹಂಚಿಕೊಂಡ, ಆಕೆಯ ಎಂಎಂಎಸ್ ದೃಶ್ಯಗಳಿಗೆ ಇನ್ನಷ್ಟು ದೃಶ್ಯಗಳನ್ನು ಜೋಡಿಸತೊಡಗಿದ. ಮಿತಿಲೇಶ್ ಬ್ಲಾಕ್ ಮೇಲ್ ನಿಂದ ಸಾಕಷ್ಟು ಹಿಂಸೆ ಅನುಭವಿಸಿದ ಹುಡುಗಿ ಕೊನೆಗೆ ತನ್ನ ದುಃಸ್ಥಿತಿಯನ್ನು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಆಕೆ ಪೋಷಕರು ಪೊಲೀಸರ ಮೊರೆ ಹೊಕ್ಕಿದ್ದು, ಇಬ್ಬರು ಯುವಕರ ಬಂಧನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+