ಇಂಟರ್ನೆಟ್ ದಿಗ್ಗಜ ಯಾಹೂಗೆ ಹೊಸ ಸಿಇಒ ಸ್ಕಾಟ್
ನ್ಯೂಯಾರ್ಕ್,
ಜ.5: ಜಾಗತಿಕ ಅಂತರ್ಜಾಲ ಸಂಸ್ಥೆ ಯಾಹೂ ಕೊನೆಗೂ ಹೊಸ ಬಾಸ್ ಆಯ್ಕೆ ಮಾಡಿಕೊಂಡಿದೆ. ಇಬೇ ಪೇಪಾಲ್ ಸಂಸ್ಥೆ ಮಾಜಿ ಮುಖ್ಯಸ್ಥ ಸ್ಕಾಟ್ ಥಾಮ್ಸನ್ ರನ್ನು ಯಾಹೂ ಸಂಸ್ಥೆಯ ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ. ಕರೋಲ್ ಬರ್ಟ್ಜ್ ರನ್ನು ವಜಾಗೊಳಿಸಿದ ನಂತರ ಸ್ಕಾಟ್ ಗೆ ಸ್ಥಾನ ಕಲ್ಪಿಸಲಾಗಿದೆ. id="toptextpromo">ಹೊಸ
ಸಿಇಒ ನೇಮಕಾತಿ ಬಗ್ಗೆ ಅನೇಕ ಊಹಾಪೋಹಗಳು ಎದ್ದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ಮೊದಲೇ ಎಚ್ಚೆತ್ತುಕೊಂಡ ಯಾಹೂ ಹೊಸ ಸಿಇಒ ನೇಮಕ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಯಾಹೂ
ಸಂಸ್ಥೆಯ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಥಿರವಾದ ಆಡಳಿತ ನೀಡಲು ಸ್ಕಾಟ್ ಸಮರ್ಥರಿದ್ದಾರೆ. ಆನ್ ಲೈನ್ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ, ಆಸ್ತಿ ನಿರ್ವಹಣೆಗೆ ಮಹತ್ವ ನೀಡಲಾಗುವುದು ಎಂದು ಚೇರ್ ಮನ್ ರಾಯ್ ಬೋಸ್ಟಾಕ್ ಹೇಳಿದ್ದಾರೆ.











Click it and Unblock the Notifications