ಮುಖೇಶ್ ಅಂಬಾನಿ ಕೈಗೆ ಈಟಿವಿ ವಾಹಿನಿ ರಿಮೋಟ್

ಟಿವಿ 18 ಹಾಗೂ ಈನಾಡು ಸಮೂಹ ವಾಹಿನಿಯ ಮೇಲೆ ರಿಲಯನ್ಸ್ ಹಿಡಿತ ಸಾಧಿಸುವತ್ತ ದಾಪುಗಾಲು ಹಾಕಿದೆ. ರಿಲಯನ್ಸ್ ಸಂಸ್ಥೆ ಈ ಎರಡು ಸಂಸ್ಥೆಗಳ ಮೇಲೆ 3,500 ಕೋಟಿ ರೂ ಹೂಡಿಕೆ ಮಾಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.
ರಿಲಯನ್ಸ್ ಸಂಸ್ಥೆ ನಿಮೇಶ್ ಕಂಪಾನಿ ಅವರ ಜೆಎಂ ಫೈನಾನ್ಸಿಷಿಯಲ್ ಸಮೂಹದ ಮೂಲಕ ಉಷೋದಯ ಎಂಟರ್ ಪ್ರೈಸರ್ ನಲ್ಲಿ 2,600 ಕೋಟಿ ರು ಹೂಡಿರುವುದಾಗಿ ಇತ್ತೀಚೆಗೆ ಹೈಕೋರ್ಟ್ ನಲ್ಲಿ ಪ್ರಕಟಿಸಿತ್ತು. ನಿಮೇಶ್ ಒಪ್ಪಂದದಿಂದ ಹಿಂದೆ ಸರಿದ ಬಳಿಕ ರಿಲಯನ್ಸ್ ಸಂಸ್ಥೆ ನೆಟ್ವರ್ಕ್ 18 ಹಾಗೂ ಟಿವಿ 18 ನಲ್ಲಿ ಹೂಡಿಕೆ ಮಾಡಿತು.
ಈ ಎರಡು ಜಾಲಗಳು ತೆಲುಗು ಹೊರತು ಪಡಿಸಿ ಈಟಿವಿ ಸುದ್ದಿವಾಹಿನಿಯಲ್ಲಿ ನೂರರಷ್ಟು ಷೇರು ಹೊಂದಲಿದೆ. ಉಳಿದ ಮನರಂಜನಾ ವಾಹಿನಿಗಳ ಶೇ.50ರಷ್ಟು ಷೇರು ಹಾಗೂ ಈಟಿವಿ, ಈಟಿವಿ2 ವಾಹಿನಿಗಳ ಶೇ.24.5 ಷೇರು ರಿಲಯನ್ಸ್ ಪಾಲಾಗಲಿದೆ.












Click it and Unblock the Notifications