ಬಡ ರಾಷ್ಟ್ರ ಕೂಡಾ ಚಿನ್ನ ಉತ್ಪಾದನೆಯಲ್ಲಿ ಟಾಪ್
7) ಇಂಡೋನೇಷ್ಯಾ: ಏಷ್ಯಾದ ರಾಷ್ಟ್ರವಾಗಿರುವ ಇಂಡೋನೇಷ್ಯಾ ಮಿಶ್ರಿತ ಆರ್ಥಿಕತೆಯನ್ನು ಹೊಂದಿದ್ದು ಖಾಸಗಿ ರಂಗದೊಂದಿಗೆ ಸರ್ಕಾರೀ ಉದ್ಯಮಗಳೂ ಪ್ರಬಲವಾಗಿ ಬೆಳವಣಿಗೆ ಹೊಂದಿವೆ.
ಇದು ಜಿ 20 ರಾಷ್ಟ್ರಗಳ ಸದಸ್ಯನೂ ಆಗಿದ್ದು ಒಟ್ಟು ಜಿಡಿಪಿ 706.7 ಬಿಲಿಯನ್ ಡಾಲರ್ ಗಳಾಗಿದ್ದು ತಲಾ ಜಿಡಿಪಿ 3015 ಡಾಲರ್ ಗಳಾಗಿವೆ. ಇಲ್ಲಿ ವಾರ್ಷಿಕ 1.27 ಲಕ್ಷ ಕೆಜಿಗಳಷ್ಟು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ.
8) ಕೆನಡಾ : ವಿಶ್ವದ ಶ್ರೀಮಂತ ರಾಷ್ಟ್ರವಾಗಿರುವ ಕೆನಡಾ 97,367 ಕೆಜಿಗಳಷ್ಟು ಚಿನ್ನವನ್ನು ಉತ್ಪಾದಿಸುತಿದ್ದು ಇಲ್ಲಿನ ಜನತೆಯ ತಲಾ ಆದಾಯ ಕೂಡ ಹೆಚ್ಚಿದೆ. ಜಿ8 ರಾಷ್ಟ್ರಗಳ ಒಕ್ಕೂಟದ ಸದಸ್ಯನೂ ಆಗಿರುವ ಕೆನಡಾ ವಿಶ್ವದ 10 ಪ್ರಮುಖ ವ್ಯಾಪಾರಿ ರಾಷ್ಟ್ರವೂ ಆಗಿದೆ. ಕೆನಡಾ ಅತೀ ಹೆಚ್ಚು ಸರಕನ್ನು ಅಮೇರಿಕಾ, ಇಂಗ್ಲೆಂಡ್ ಹಾಗೂ ಜಪಾನ್ ಗೆ ರಫ್ತು ಮಾಡುತ್ತಿದೆ.
9) ಘಾನಾ : ಎಕಾನಮಿ ವಾಚ್ ಸಂಸ್ಥೆಯ ಸಮೀಕ್ಷೆ ಪ್ರಕಾರ ಘಾನಾ 2011 ರಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದು ಇದು ಮದ್ಯಮ ಆದಾಯ ಹೊಂದಿರುವ ರಾಷ್ಟ್ರವಾಗಿದೆ.ಇಲ್ಲಿನ ಜನರ ತಲಾ ಆದಾಯ ಆಫ್ರಿಕಾದ ಇತರ ರಾಷ್ಟ್ರಗಳ ಜನರ ಆದಾಯಕ್ಕಿಂತ ದ್ವಿಗುಣವಾಗಿದ್ದು ಇಲ್ಲಿ ವಾರ್ಷಿಕ 97,197 ಕೆಜಿಗಳಷ್ಟು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ.
10) ಉಜ್ಬೆಕಿಸ್ಥಾನ: ವಿಶ್ವದ 6 ನೇ ಅತೀ ದೊಡ್ಡ ಹತ್ತಿ ಬೆಳೆಯುವ ರಾಷ್ಟ್ರವಾಗಿರುವ ಉಜ್ಬೆಕಿಸ್ಥಾನ ಎರಡನೇ ಅತೀ ದೊಡ್ಡ ಹತ್ತಿ ರಫ್ತುದಾರನೂ ಆಗಿದೆ.ಇದು ಗಣನೀಯ ಪ್ರಮಾಣದಲ್ಲಿ ನೈಸರ್ಗಿಕ ಅನಿಲ, ಕಲ್ಲಿದ್ದಲು, ತೈಲ, ಬೆಳ್ಳಿ ಹಾಗೂ ಯುರೇನಿಯಂ ನ್ನೂ ಉತ್ಪಾದಿಸುತ್ತಿದೆ.ಇಲ್ಲಿ ನಿರುದ್ಯೋಗ ಸಮಸ್ಯೆ ಶೇ 20 ರಷ್ಟಿದ್ದು ಇಲ್ಲಿ 73,000 ಕೆಜಿಗಳಷ್ಟು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ. ಭಾರತ ಈ ಪಟ್ಟಿಯಲ್ಲಿ 51ನೇ ಸ್ಥಾನದಲ್ಲಿದೆ. 2,362 ಕೆಜಿ ಉತ್ಪಾದನೆಯಾಗುತ್ತದೆ.












Click it and Unblock the Notifications