ಜಗನ್ ಬಂಟನ ಬಂಧನ, ಮುಂದ? ಸ್ವತಃ ಜಗನ್ ರೆಡ್ಡಿ

ಹೈದರಾಬಾದ್, ಜ.3:ವಿವಿ ಲಕ್ಷ್ಮಿನಾರಾಯಣ ನೇತೃತ್ವದ ಸಿಬಿಐ ತಂಡವು ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಅವರ ಅತ್ಯಾಪ್ತ, ಜಗತಿ ಪಬ್ಲಿಕೇಷನ್ಸ್ ಕಂಪನಿಯ ಉಪಾಧ್ಯಕ್ಷ ವಿ. ವಿಜಯ್ ಸಾಯಿ ರೆಡ್ಡಿಯನ್ನು ಸೋಮವಾರ ರಾತ್ರಿ ಬಂಧಿಸಿದೆ. ಸಾಯಿ ರೆಡ್ಡಿಯನ್ನು ವಶಕ್ಕೆ ತೆಗೆದುಕೊಂಡ ಬಳಿಕ ಸಿಬಿಐ ತಂಡವು ಸಾಕ್ಷಿ ಪತ್ರಿಕೆ ಮತ್ತು ಚಾನಲ್ಲುಗಳ ಕಚೇರಿಗಳನ್ನು ಶೋಧಿಸುತ್ತಿದ್ದಾರೆ.

ಬಂಧನದ ಬಳಿಕ ಜಗನ್ ವಿರುದ್ಧ ಸಾಯಿ ರೆಡ್ಡಿ ಸಾಕಷ್ಟು ಮಾಹಿತಿ ನೀಡಿದ್ದು, ಈಲೋ ಆಗ್ಲೋ ಜಗನ್ ಬಂಧನ ಖಚಿತ ಎನ್ನಲಾಗಿದೆ. ಜತೆಗೆ ಜಗನ್ ಅತ್ಯಾಪ್ತ ಉದ್ಯಮಿಗಳಾದ ನಿಮ್ಮಗಡ್ಡ ಪ್ರಸಾದ್ ಮತ್ತು ಪೆನ್ನಾ ಪ್ರತಾಪ್ ರೆಡ್ಡಿ ಸಹ ಬಂಧನಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ.

ಸಾಯಿ ರೆಡ್ಡಿ ಆಂಧ್ರದ ಮಾಜಿ ಮುಖ್ಯಮಂತ್ರಿ ದಿ. ವೈ ಎಸ್ ರಾಜಶೇಖರ ರೆಡ್ಡಿ ಅವರ ಕಾಲದಿಂದಲೂ ರೆಡ್ಡಿ ಕುಟುಂಬದ ಆಡಿಟರ್ ಸಹ ಆಗಿದ್ದಾರೆ. ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದ್ದು, ಪ್ರಕರಣದ ಮೊದಲ ಆರೋಪಿ ಜಗನ್ ರೆಡ್ಡಿ ಅವರನ್ನು ಸಿಬಿಐ ಮಂಗಳವಾರ ಬಂಧಿಸುವ ಸಾಧ್ಯತೆ ಇದೆ. ಐಪಿಸಿಯ 7 ಸೆಕ್ಷನ್ ಗಳ ಅಡಿಯಲ್ಲಿ ಸಾಯಿ ರೆಡ್ಡಿ ಬಂಧನ, ವಿಚಾರಣೆ ನಡೆದಿದೆ.

ಆಂಧ್ರ ಹೈಕೋರ್ಟಿನ ನಿರ್ದೇಶನದಂತೆ ಸಿಬಿಐ ಜಗನ್ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಕಳೆದ ಐದು ತಿಂಗಳಲ್ಲಿ 40ಕ್ಕೂ ಹೆಚ್ಚು ಬಾರಿ ಸಾಯಿ ರೆಡ್ಡಿ ವಿಚಾರಣೆ ನಡೆಸಿದ್ದ ಸಿಬಿಐ ಕೊನೆಗೂ ಅವರನ್ನು ಬಂಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+