ಶಿವಮೊಗ್ಗದಲ್ಲಿ 30 ಹೆಣ್ಣು ಭ್ರೂಣ ಹತ್ಯೆ
ಶಿವಮೊಗ್ಗ,
ಡಿ. 31 : ಹೆಣ್ಣುಮಕ್ಕಳು ಹೊಸ ಆಶಾಕಿರಣದ ನಿರೀಕ್ಷೆಯಲ್ಲಿ ಹೊಸ ವರ್ಷವನ್ನು ಎದಿರುನೋಡುತ್ತಿರುವ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ನಗರದ ಹೊರವಲಯದಲ್ಲಿ 30 ಹೆಣ್ಣು ಭ್ರೂಣಗಳು ಪತ್ತೆಯಾಗಿವೆ. id="toptextpromo">ಹೆಣ್ಣು
ಭ್ರೂಣಗಳನ್ನು ಡಬ್ಬಿಯೊಂದರಲ್ಲಿ ತುಂಬಿ ಎಸೆಯಲಾಗಿತ್ತು. ಇದರ ಹಿಂದೆ ಖಾಸಗಿ ಆಸ್ಪತ್ರೆಯ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಸುಪರಿಂಟೆಂಡೆಂಟ್ ಆಫ್ ಪೊಲೀಸ್ ರಮಣ ಗುಪ್ತಾ ಅವರು ತನಿಖೆಗೆ ಆದೇಶಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಲ್ಲ
ಭ್ರೂಣಗಳನ್ನು ಪರೀಕ್ಷೆಗೆಂದು ಕಳುಹಿಸಲಾಗಿದ್ದು, ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಿಆರ್ ಚನ್ನಬಸಪ್ಪ ಅವರು ಹೇಳಿದ್ದಾರೆ. ಜೊತೆಗೆ, ಲಿಂಗ ಪತ್ತೆ ಮಾಡುವ ಮತ್ತು ಹೆಣ್ಣು ಭ್ರೂಣ ಹತ್ಯೆ ಮಾಡುವ ದೊಡ್ಡ ಜಾಲವೊಂದು ಕಾರ್ಯಾಚರಣೆಯಲ್ಲಿದೆ ಎಂದು ಪೊಲೀಸರು ಶಂಕಿಸಿದ್ದಾರೆ.











Click it and Unblock the Notifications