ಬೆಂಬನಿಯಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಬಂದ್

Two wheeler parking
ಬೆಂಗಳೂರು, ಡಿ 29: ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ದ್ವಿಚಕ್ರ ವಾಹನ ಸವಾರರಿಗೆ ಹೊಸವರ್ಷದ ಶಾಕ್ ನೀಡಿದೆ. ಜನವರಿ 1, 2012 ಅನ್ವಯವಾಗುವಂತೆ ಮೆಜಿಸ್ಟಿಕ್ ಭಾಗದಲ್ಲಿ (ಕೆಂಪೇಗೌಡ ಬಸ್ ನಿಲ್ದಾಣ) ದ್ವಿಚಕ್ರ ಪಾರ್ಕಿಂಗ್ ಸ್ಥಗಿತಗೊಳಿಸಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ.

ದ್ವಿಚಕ್ರ ವಾಹನ ತಂಗುದಾಣಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲು ಅಸಾಧ್ಯ ಎಂದು ಸಂಸ್ಥೆ ಸ್ಪಷ್ಟ ಪಡಿಸಿ ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದ ದ್ವಿಚಕ್ರ ಪಾರ್ಕಿಂಗ್ ಸ್ಥಳದಲ್ಲಿ ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿಯ ನಂತರ ವಾಹನ ನಿಲ್ದಾಣ ಸೌಲಭ್ಯ ಸ್ಥಗಿತಗೊಳ್ಳುತ್ತಿದೆ.

ಸಾವಿರಾರು ಮಂದಿ ಬಳಸಿಕೊಳ್ಳುವ ಈ ಪಾರ್ಕಿಂಗ್ ಸ್ಥಳವನ್ನು ಸಾರಿಗೆ ಸಂಸ್ಥೆ ತೆರವು ಗೊಳಿಸಲು ಹೊರಟಿರುವುದರಿಂದ ಇದನ್ನೇ ನಂಬಿಕೊಂಡಿರುವ ಸಾವಿರಾರು ಜನ ತೊಂದರೆ ಅನುಭವಿಸುವಂತಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸಾರಿಗೆ ಸಂಸ್ಥೆಯ ಕ್ರಮ ತೀರಾ ಅನ್ಯಾಯ ಎಂದು ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದ್ದಾರೆ.

ನಗರದ ವಿವಿಧದೆ ನೆಲೆಸಿರುವ ಸಾವಿರಾರು ಉದ್ಯೋಗಿಗಳು ಈ ನಿಲ್ದಾಣವನ್ನೇ ನಂಬಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರಿನಿಂದ ಅಪ್ ಅಂಡ್ ಡೌನ್ ಮಾಡುವ ಉದ್ಯೋಗಿಗಳು ಈ ನಿಲ್ದಾಣದಲ್ಲೇ ಪಾರ್ಕ್ ಮಾಡಿ ಹೋಗುತ್ತಾರೆ. ಮುಖ್ಯವಾಗಿ ಆನೇಕಲ್, ಚಿಕ್ಕಬಳ್ಳಾಪುರ, ಹೊಸೂರು, ತುಮಕೂರು, ದೇವನಹಳ್ಳಿ ಕಡೆ ಹೋಗಿ ಬರುವ ಉದ್ಯೋಗಿಗಳಿಗೆ ಇದರಿಂದ ಬಹಳಷ್ಟು ತೊಂದರೆಯಾಗಲಿದೆ.

ಈ ವ್ಯವಸ್ಥೆ ತಾತ್ಕಾಲಿಕ ದ್ವಿಚಕ್ರ ವಾಹನ ನಿಲ್ಲಿಸುವವರಲ್ಲದೆ ಇಡೀ ರಾತ್ರಿ ಪಾರ್ಕಿಂಗ್ ಮಾಡಿ ಪರವೂರಿಗಳಿಗೆ ಹೋಗಿ ಬರುವ ಜನರಿಗೂ ಅನ್ವಯಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+