ಸೋನಿ ಎಲ್ ಸಿಡಿ ಖರೀದಿಗೆ ಮುಂದಾದ ಸ್ಯಾಮ್‌ಸಂಗ್

ಒಪ್ಪಂದದ ನಂತರ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಹಾಗೂ ಜಪಾನ್ ಮೂಲದ ಸೋನಿ ಕಾರ್ಪೋರೇಷನ್ ಜಂಟಿ ಯೋಜನೆಯಡಿಯಲ್ಲಿ ಟಿವಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ಎಲ್ ಸಿಡಿ ತಯಾರಿಸಲಿದೆ.
ಎಲ್ ಸಿಡಿ ಘಟಕದಲ್ಲಿ ಸೋನಿ ಸಂಸ್ಥೆ ಶೇ.50 ರಷ್ಟು ಪಾಲು ಹೊಂದಿದ್ದು, 2004ರಲ್ಲಿ ಆರಂಭವಾದ ಈ ಜಂಟಿ ಯೋಜನೆ ಘಟಕ ಏಳಿಗೆ ಕಂಡಿರಲಿಲ್ಲ.
ನವೆಂಬರ್ ತಿಂಗಳಿನಲ್ಲೂ ಕೂಡಾ ಸೋನಿ ಸಂಸ್ಥೆ ನಷ್ಟ ಅನುಭವಿಸಿತ್ತು. ಸತತ ನಾಲ್ಕು ವರ್ಷಗಳಿಂದ ನಷ್ಟದಲ್ಲಿದ್ದ ಟಿವಿ ಘಟಕ 2.2 ಬಿಲಿಯನ್ ಡಾಲರ್ ನಷ್ಟು ನಷ್ಟ ಅನುಭವಿಸಿತ್ತು.
ಎಲ್ ಸಿಡಿ ಘಟಕದ ಪುನರುತ್ಥಾನ ಕಾರ್ಯದಲ್ಲಿ ವಿಫಲವಾದ ಜಪಾನಿನ ಟಿವಿ ದಿಗ್ಗಜ ಸೋನಿ, ಈಗ ಸ್ಯಾಮ್ ಸಂಗ್ ಜೊತೆ ಕೈ ಜೋಡಿಸಿದೆ. ಸುದ್ದಿ ಹಬ್ಬಿದ್ದಂತೆ ಸೋನಿ ಷೇರುಗಳು ಮೇಲಕ್ಕೇರಿದೆ.
ಸ್ಯಾಮ್ ಸಂಗ್ ವಿಶ್ವದ ನಂ.1 ಟಿವಿ ನಿರ್ಮಾಣ ಸಂಸ್ಥೆಯಾಗಿ ಮುಂದುವರೆದಿದೆ. ದಕ್ಷಿಣ ಕೊರಿಯಾದ ಎಲ್ ಜಿ ಎಲೆಕ್ಟ್ರಾನಿಕ್ಸ್ ಕಂಪನಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ಸೋನಿ ಮೂರನೇ ಸ್ಥಾನದಲ್ಲಿ ಕಷ್ಟನಷ್ಟ ಅನುಭವಿಸುತ್ತಿದೆ.












Click it and Unblock the Notifications