5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ಮಣಿಪುರ, ಗೋವಾ, ಪಂಜಾಬ್ ಮತ್ತು ಉತ್ತರಾಖಂಡಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಮಾತ್ರ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 6ರಂದು ಫಲಿತಾಂಶ ಹೊರಬೀಳಲಿದೆ.
ಮಣಿಪುರದಲ್ಲಿ ಜನವರಿ 28, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಜ.30, ಗೋವಾದಲ್ಲಿ ಮಾರ್ಚ್ 3ರಂದು ಮತ್ತು ಅತ್ಯಂತ ಪ್ರತಿಷ್ಠಿತ ಕಣವಾಗಿರುವ ಉತ್ತರ ಪ್ರದೇಶದಲ್ಲಿ ಫೆಬ್ರವರಿ 4ರಿಂದ ಫೆ.28ರವರೆಗೆ ಏಳು ಹಂತದಲ್ಲಿ ಮತದಾನ ನಡೆಯಲಿದೆ.
ದೆಹಲಿಯಲ್ಲಿ ಇಂದು ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಎಸ್ ವೈ ಖುರೈಶಿ, ಚುನಾವಣಾ ಆಯುಕ್ತರಾದ ವಿಎಸ್ ಸಂಪತ್, ಎಚ್ ಎಸ್ ಬ್ರಹ್ಮ ಅವರು ಪಾಲ್ಗೊಂಡಿದ್ದರು. ಚುನಾವಣಾ ನೀತಿ ಸಂಹಿತಿ ಈ ಕ್ಷಣದಿಂದ ಜಾರಿಗೆ ಬರಲಿದೆ ಎಂದು ಖುರೈಶಿ ತಿಳಿಸಿದರು.











Click it and Unblock the Notifications