ಜಯಲಲಿತಾ-ಶಶಿಕಲಾ ಸಂಬಂಧ ಕುದುರಿದ್ದಾದರೂ ಹೇಗೆ?

ಅವರು ಮಾಜಿ ಐಎಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷೆ ವಿ. ಚಂದ್ರಲೇಖಾ. ಅವರೇ ಇವರ ಸ್ನೇಹಕ್ಕೆ ನಾಂದಿ ಹಾಡಿದ್ದು. ಆಗ ಚಂದ್ರಲೇಖಾ ದಕ್ಷಿಣ ಆರ್ಕಟ್ ನ ಜಿಲ್ಲಾಧಿಕಾರಿಯಾಗಿದ್ದರು. ಶಶಿಕಲಾ ಗಂಡ ನಟರಾಜನ್, ಚಂದ್ರಲೇಖಾ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ. ಈತ ತುರ್ತು ಪರಿಸ್ಥಿತಿ ವೇಳೆ ಇದ್ದ ಕೆಲಸ ಕಳೆದುಕೊಂಡು 1976ರಿಂದ 80ರವರೆಗೆ ನಿರುದ್ಯೋಗಿಯಾಗಿದ್ದ. ಡಿಎಂಕೆ ಸರಕಾರ ಇಂತಹ ಕ್ರಮ ಕೈಗೊಂಡಿತ್ತು. ಪನ್ನೀರಸೆಲ್ವಂಗೂ ಇದೇ ಗತಿಯಾಗಿತ್ತು.
ಈ ಸಂದರ್ಭದಲ್ಲಿ ಶಶಿಕಲಾ ಆಗಾಗ್ಗೆ ಚಂದ್ರಲೇಖಾ ಬಳಿ ಬಂದು ರಾಜಕೀಯವಾಗಿ ತನ್ನ ಪತಿಯನ್ನು ಹೇಗೆ ಟಾರ್ಗೆಟ್ ಮಾಡಲಾಗಿದೆ ಎಂದೆಲ್ಲ ಹೇಳಿಕೊಳ್ಳುತ್ತಿದ್ದರು. ಈ ಸಂಬಂಧ, ಒಡವೆ ಅಡ ಇಟ್ಟು ಕೋರ್ಟಿನಲ್ಲಿ ಹೋರಾಡಿದ್ದಾಗಿಯೂ ಚಂದ್ರಲೇಖಾಗೆ ಹೇಳುತ್ತಿದ್ದರು.
ಆಗಲೇ ಅವರೊಂದು ಚೆನ್ನೈನಲ್ಲಿ ವಿಡಿಯೋ ಅಂಗಡಿಯನ್ನು ತೆರೆದಿದ್ದು. ಮುಂದೆ ಶಶಿಕಲಾ ಸಿಂಗಾಪರಕ್ಕೆ ಹೋದರು. ಅಲ್ಲಿಂದ ಭಾರಿ ಸಂಖ್ಯೆಯಲ್ಲಿ ವಿಡಿಯೋ ರೆಕಾರ್ಡರುಗಳನ್ನು ಖರೀದಿಸಿ ತಂದು, ವ್ಯಾಪಾರದಲ್ಲಿ ಅಭಿವೃದ್ಧಿ ಕಂಡರು. ಇದಕ್ಕೆ ಪಿಆರ್ಒ ಆಗಿದ್ದ ನಟರಾಜನ್ ಸಹ ಸಾಥ್ ನೀಡಿದರು.
ಆ ಸಂದರ್ಭದಲ್ಲೇ, ಅಣ್ಣಾಡಿಎಂಕೆ ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿದ್ದ ಜಯಲಲಿತಾಗೆ ತನ್ನ ವಿಡಿಯೋ ವಹಿವಾಟನ್ನು ಪರಿಚಯಿಸುವಂತೆ ಚಂದ್ರಲೇಖಾಗೆ ಶಶಿಕಲಾ ಗಂಟುಬಿದ್ದರು. ಸರಿ, ನನಗೆ ಚೆನ್ನಾಗಿಯೇ ತಿಳಿದವರೆಂದು ಇಬ್ಬರನ್ನೂ ಜಯಲಲಿತಾಗೆ ಪರಿಚಯಿಸಿದೆ.
ಅದರಂತೆ ಇಬ್ಬರ ನಡುವೆ ಪರಿಚಯ ಕುದುರಿತು. ಜಯಲಲಿತಾ ಇಲ್ಲಿಗೆ ಖಾಯಂ ಗ್ರಾಹಕರಾದರು. ಜಯಲಲಿತಾ ಆಳು ದಿನಾ ಬಂದು ಇಲ್ಲಿ ವಿಡಿಯೋ ತೆಗೆದುಕೊಂಡು ಹೋಗುತ್ತಿದ್ದ. ಇವರಿಬ್ಬರ ವಿಡಿಯೋ ವಹಿವಾಟಿನಿಂದ ಪ್ರಭಾವಿತರಾದ ಜಯಾ, ಅವರನ್ನು ಕಾಯಂ ಆಗಿ ಪಕ್ಷದ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡರು. ಮುಂದಿನದು ಇತಿಹಾಸ.












Click it and Unblock the Notifications