ಜಯಲಲಿತಾ ಮತ್ತೆ ಶಶಿಗೆ ಸ್ನೇಹದ ಗುಲಾಬಿ ನೀಡುವುದು ಖಚಿತ

ಮುಂದೆ ಶಶಿಕಲಾ ಮತ್ತು ನಟರಾಜನ್ ಜತೆಗೆ ಅವರ ಇಡೀ ಕುಟುಂಬ ಜಯಾ ಮೇಲೆ ಪ್ರಭಾವ ಬೀರತೊಡಗಿತು. ಅದಾದ ನಂತರ ಶಶಿ ಹಿಂದಿರುಗಿ ನೋಡಿದ್ದೇ ಇಲ್ಲ. ಮಾಜಿ ಐಎಎಸ್ ಅಧಿಕಾರಿ ಚಂದ್ರಲೇಖಾ ಅವರತ್ತಲೂ ಕಣ್ಣೆತ್ತಿ ನೋಡಲಿಲ್ಲ. ಮೊದಲಿನಂತೆ ಚಂದ್ರಲೇಖಾ ಬಳಿಗೆ ಎಂದಿಗೂ ಶಶಿ ಬರಲಿಲ್ಲ. ಅವರ ಶಶಿಯನ್ನು ಅಲ್ಲಿಗೇ ಬಿಟ್ಟುಬಿಟ್ಟರು.
ಆದರೆ ಬುದ್ಧಿವಂತೆ ಜಯಲಲಿತಾ ಹೇಗೆ ಶಶಿಕಲಾ ಮೋಡಿಗೆ ಒಳಗಾದರು. ಅವರನ್ನು ಅಷ್ಟೊಂದು ಹೇಗೆ ನಂಬಿದರು ಎಂಬುದು ಮಾಜಿ ಐಎಎಸ್ ಅಧಿಕಾರಿ ಚಂದ್ರಕಲಾಗೆ ಇಂದಿಗೂ ಚಿದಂಬರರಹಸ್ಯವೇ. ಏಕೆಂದರೆ ಶಶಿ, ಸಾಮಾನ್ಯ ಗೃಹಿಣಿ. ಹೆಚ್ಚು ಓದಿದವಳೂ ಅಲ್ಲ. ಆದರೆ ಜಾಣೆ. ಕತೆ ಕಟ್ಟಿ ಜನರನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳುವುದು ಎಂಬುದು ಆಕೆಗೆ ಕರಗತವಾಗಿತ್ತು. ಬಹುಶಃ ಶಶಿಕಲಾ ಅವರಲ್ಲಿದ್ದ ಈ ಕಲೆಯೇ ಜಯಾರನ್ನು ಮೋಡಿ ಮಾಡಿದ್ದು ಅನಿಸುತ್ತದೆ ಎನ್ನುತ್ತಾರೆ ಚಂದ್ರಕಲಾ.
ಆಶ್ಚರ್ಯದ ಸಂಗತಿಯೆಂದರೆ ಶಶಿಕಲಾ-ಜಯಲಲಿತಾ ದೂರವಾಗಿದ್ದರ ಬಗ್ಗೆ ಮಾಧ್ಯಮಗಳು ಈಗ ಏಕೆ ಇಷ್ಟೊಂದು ಪ್ರಚೋದನಕಾರಿಯಾಗಿದೆ ಎಂಬುದು ಚಂದ್ರಕಲಾಗೆ ಆಶ್ಚರ್ಯವಾಗಿದೆಯಂತೆ: 'ನೋಡಿ. ಈ ಹಿಂದೆಯೂ (1996ರಲ್ಲಿ) ಜಯಾ, ಶಶಿಕಲಾರನ್ನು ಉಚ್ಛಾಟಿಸಿದ್ದರು. ಮನೆಯಿಂದ ಸ್ವಲ್ಪ ದಿನ ಹೊರಹಾಕಿದ್ದರು. ಮತ್ತೆ ಒಂದಾದರು. ಈಗಲೂ ಅಷ್ಟೇ, ಮತ್ತೆ ಒಂದಾಗುತ್ತಾರೆ ಎಂಬುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಜಯಲಲಿತಾ ಮತ್ತೆ ಶಶಿಗೆ ಸ್ನೇಹದ ಗುಲಾಬಿ ನೀಡುವುದು ಖಚಿತ (ಒಮ್ಮೆ ಚಿತ್ರ ನೋಡಿ). ಏಕೆಂದರೆ, ಶಶಿಕಲಾ ಕುಟುಂಬದವರು ಜಯಲಲಿತಾ ಮೇಲೆ ಅಷ್ಟೊಂದು ಹಿಡಿತ ಸಾಧಿಸಿದ್ದಾರೆ. ಇದರಲ್ಲಿ ಯಾವುದೇ ಉತ್ಪೇಕ್ಷೆ ಇಲ್ಲ' ಎಂದು ಮಾತು ಮುಗಿಸಿದರು ಚಂದ್ರಕಲಾ.












Click it and Unblock the Notifications