ಪೋಲಿ ಚಿತ್ರ, ರೇಪ್ ಖಯಾಲಿ, ತುಂಟ ಪೋರರು ಜೈಲಿಗೆ

Teen MMS Kerala
ತಿರುವನಂತಪುರಂ, ಡಿ.22: ಬಾಲಕಿಯರ ಮೇಲೆ ಅತ್ಯಾಚಾರ ಎಸೆಗಿ, ಎಂಎಂಎಸ್ ಮಾಡಿ ಹಂಚುತ್ತಿದ್ದ ಐನಾತಿ ಯುವಕರಿಬ್ಬರನ್ನು ವರ್ಕಲಾ ಪೊಲೀಸರು ಕೊನೆಗೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಬಾಲಕರನ್ನು ಅಪ್ರಾಪ್ತ ವಯಸ್ಕರ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಐಪಿಸಿ ಸೆಕ್ಷನ್ 66ಸಿ ಹಾಗೂ ಐಟಿ ಕಾಯ್ದೆ 376 ಪ್ರಕಾರ(ರೇಪ್ ಹಾಗೂ ಲೈಂಗಿಕ ಕಿರುಕುಳ, ಸೈಬರ್ ಮಾಧ್ಯಮದ ಮೂಲಕ ಅಶ್ಲೀಲ ದೃಶ್ಯ ಹಂಚುವಿಕೆ) ಕೇಸು ದಾಖಲಿಸಲಾಗಿದೆ.

ಬಾಧಿತ ಬಾಲಕಿಯೊಬ್ಬಳ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಆಕೆ ತನ್ನ ಬಾಯ್ ಫ್ರೆಂಡ್ ಮೊಬೈಲ್ ನಲ್ಲಿ ತನ್ನದೇ ನಗ್ನ ದೃಶ್ಯಗಳುಳ್ಳ ಎಂಎಂಎಸ್ ಹರಿದಾಡುತ್ತಿರುವುದನ್ನು ಕಂಡು ಮುಜುಗರ, ಗಾಬರಿ, ಭಯ ಕಂಪಿತಳಾಗಿದ್ದಾಳೆ.

ನಂತರ ನಡೆದ ವಿಷಯ ಎಲ್ಲವನ್ನೂ ತನ್ನ ಪೋಷಕರಿಗೆ ಹೇಳಿದ್ದಾಳೆ.ಜಾಲ ಬೀಸಿದ ಪೊಲೀಸರಿಗೆ ಐನಾತಿ ಬಾಲಕರು ಸಿಕ್ಕಿಬಿದ್ದಿದ್ದಾರೆ.

ಹೈಸ್ಕೂಲ್ ದಾಟಿ,ಕಾಲೇಜು ಮೆಟ್ಟಿಲೇರಿರುವ ಅತ್ತಲಾಗಿ ಬಾಲಕರ ಕೆಟಗೆರಿಗೂ ಸೇರದ ಯುವಕರ ಕೆಟಗೆರಿಗೂ ಸೇರದ ಈ ಹುಡುಗರು ಆ ಹುಡುಗಿಗೆ ಪ್ರೀತಿಯ ಮೋಹದ ಸೆಳೆಗೆ ಸಿಲುಕಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾಮದಾಟದಲ್ಲಿ ತೊಡಗುತ್ತಾರೆ. ಮೂರನೇ ಹುಡುಗರ ಎಲ್ಲವನ್ನು ಚಿತ್ರಿಸಿ, ಎಂಎಂಎಸ್ ಮಾಡಿ ಬ್ಲೂಟೂಥ್ ಮುಖಾಂತರ ಎಲ್ಲರ ಮೊಬೈಲ್ ಗಳಿಗೆ ಹಂಚುತ್ತಾನೆ.

ಇದೇ ರೀತಿ ಹಲವು ಹುಡುಗಿಯರ ಜೊತೆ ಪ್ರೇಮ ಕಾಮದಾಟ ಆಡಿರುವ ಈ ಜೋಡಿಗೆ ಸಹಾಯಕವಾಗಿದ್ದ ಇನ್ನೊಬ್ಬ ಹುಡುಗರ ಹುಡುಕಾಟ ಜಾರಿಯಲ್ಲಿದೆ ಎಂದು ವರ್ಕಲಾ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+